Publish Date: Sat, 16 Jul 2022 (19:39 IST)
Updated Date: Sat, 16 Jul 2022 (19:42 IST)
ಬಸವರಾಜ ಬೊಮ್ಮಾಯಿ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದು ಜು.28ಕ್ಕೆ ಒಂದು ವರ್ಷ ಪೂರೈಸಲಿರುವ ಹಿನ್ನೆಲೆಯಲ್ಲಿ ವರ್ಷದ ಸಾಧನೆ ಕಾರ್ಯಕ್ರಮ ಆಯೋಜಿಸುವ ಮೂಲಕ ಆ.3ರ ಸಿದ್ದರಾಮೋತ್ಸವದ ಅಬ್ಬರವನ್ನು ಕಟ್ಟಿಹಾಕಲು ಬಿಜೆಪಿ ಮುಂದಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾಧನೆ, ಯೋಜನೆಗಳ ಬಗ್ಗೆ ಮನೆ ಮನೆಗೆ ಪ್ರಚಾರ ಅಭಿಯಾನ, ಪಕ್ಷದ ಸಂಘಟನಾ ಚಟುವಟಿಕೆಗಳ ಕುರಿತು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು. ಬೆಂಗಳೂರಿನಲ್ಲಿ ಸರ್ಕಾರಿ ಕಾರ್ಯಕ್ರಮ, ದೊಡ್ಡಬಳ್ಳಾಪುರದಲ್ಲಿ ಪಕ್ಷದ ವತಿಯಿಂದ ಬೃಹತ್ ಸಮಾವೇಶ ಏರ್ಪಡಿಸಲಾಗುತ್ತಿದೆ. ಇನ್ನು, ಅತಿವೃಷ್ಟಿ, ಪ್ರವಾಹ ಬಾಧಿತ ಜಿಲ್ಲೆಗಳಲ್ಲಿ ರಕ್ಷಣಾ ಕಾರ್ಯಾಚರಣೆ ಜತೆಗೆ ಪರಿಹಾರ ವ್ಯವಸ್ಥೆ ತುರ್ತಾಗಿ ಕೈಗೊಳ್ಳುವ ಕುರಿತು ಡಿಸಿಗಳಿಗೆ ವಿಡಿಯೋ ಸಂವಾದದಲ್ಲಿ ಸೂಚಿಸಿರುವೆ. ಹಿಂದಿನ ವರ್ಷಗಳಂತೆಯೇ ಎನ್ಡಿಆರ್ಎಫ್ ನಿಯಮಾವಳಿಗಿಂತ ದುಪ್ಪಟ್ಟು ಮೊತ್ತದ ಬೆಳೆ, ಮನೆ ಹಾನಿ ಪರಿಹಾರ ವಿತರಣೆಗೆ ಆದೇಶ ಹೊರಡಿಸಿದ್ದು, ತ್ವರಿತ ಸಮೀಕ್ಷೆ ನಡೆಸಿ ಬೆಳೆ ನಷ್ಟಕ್ಕೆ ಇನ್ಪುಟ್ ಸಬ್ಸಿಡಿ ಪಾವತಿಗೆ ತಿಳಿಸಿರುವೆ ಎಂದರು