ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆಯಾಗಿರುವ ಘಟನೆ ಆನೇಕಲ್ ಪಟ್ಟಣದ ಹೂವಾಡಿಗಾರ ಬೀದಿಯಲ್ಲಿ ನಡೆದಿದೆ. 25 ವರ್ಷದ ಪ್ರೇಮ ಕೊಲೆಯಾದ ಮಹಿಳೆ. ಪತಿ ವೆಂಕಟೇಶಾಚಾರಿಯಿಂದ ಪತ್ನಿ ಪ್ರೇಮ ಹತ್ಯೆ ಮಾಡಲಾಗಿದೆ.ಅನೈತಿಕ ಸಂಬಂಧ ಶಂಕೆ ಪತ್ನಿಯ ಹತ್ಯೆಯಾಗಿದೆ ಎನ್ನಲಾಗಿದೆ. 9 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ದಂಪತಿ. ಅವರಿಗೆ 7 ವರ್ಷದ ಹೆಣ್ಣು ಮಗುವಿತ್ತು. ಅನೈತಿಕ ಸಂಬಂಧದ ವಿಚಾರವಾಗಿ ಮನೆಯಲ್ಲಿ ಪದೇ ಪದೇ ಗಲಾಟೆ ನಡೆಯಿತಿತ್ತು. ಪತ್ನಿ ಮೊಬೈಲ್ ನಲ್ಲಿ ಬೇರೊಬ್ಬನ ಜೊತೆ ಮಾತನಾಡುತ್ತಿದ್ದಳು ಎಂದು ಕೊಲೆ ಮಾಡಿದ್ದಾನೆ. ನಿನ್ನೆ ರಾತ್ರಿ ಬೇರೊಬ್ಬರ ಜೊತೆ ಮಾತಾಡೋದನ್ನ ಕೇಳಿಸಿಕೊಂಡಿದ್ದ. ಇಂದು ಬೆಳಿಗ್ಗೆ 6 ಗಂಟೆಯ ಸುಮಾರಿಗೆ ಮಚ್ಚಿನಿಂದ ಹಲ್ಲೆ ಮಾಡಿ ಕತ್ತು ಹಾಗೂ ಕೈ ಭಾಗಕ್ಕೆ ಮಚ್ಚಿನಿಂದ ಹಲ್ಲೆ ನಡೆಸಿದ್ದ. ಮನೆಯ ಬಾತ್ ಬಳಿ ಹೋಗುತ್ತಿದ್ದಂತೆ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಈ ಸಂಬಂಧ ಸ್ಥಳಕ್ಕೆ ಆನೇಕಲ್ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.