Publish Date: Mon, 25 Oct 2021 (13:04 IST)
Updated Date: Mon, 25 Oct 2021 (13:08 IST)
ವಾಷಿಂಗ್ಟನ್ : ಈರುಳ್ಳಿ ಎಲ್ಲಾ ಅಡುಗೆಗೆ ಬೇಕಿರುವ ಪದಾರ್ಥ. ಈರುಳ್ಳಿಯನ್ನು ಇಷ್ಟಪಡದೇ ಇರುವವರ ಸಂಖ್ಯೆ ತುಂಬಾ ಕಡಿಮೆ.
ರುಚಿಗೆ ಅಷ್ಟೇ ಅಲ್ಲದೇ ಆರೋಗ್ಯಕ್ಕೂ ಉತ್ತಮ. ಆದರೇ ಇದೇ ಈರುಳ್ಳಿ ಅಮೆರಿಕನ್ನರ ಪಾಲಿಗೆ ವಿಲನ್ ಅಗಿದೆ. ಅದು ಯಾಕೆ? ಹೇಗೆ? ಅಂತೀರಾ ಇಲ್ಲಿದೆ ನೋಡಿ. ಹೌದು, ಕಳೆದ ದಿನಗಳಿಂದ ಎಲ್ಲಾ ದೇಶಗಳು ಮಹಾಮಾರಿ ಕೊರೋನಾದಿಂದ ಅಟ್ಟಹಾಸದಿಂದ ಕೊಂಚ ಸಹಜಸ್ಥತಿಗೆ ಮರಳುತ್ತಿದ್ದೇವೆ. ಬಹುತೇಕ ದೇಶಗಳಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೆ ಕೋವಿಡ್ 19 ವಿರುದ್ಧ ಅಮೆರಿಕ ಹೋರಾಟ ನಡೆಸುತ್ತಿರುವಾಗಲೇ ಮತ್ತೊಂದು ಸೋಂಕು ಹರಡಿರುವುದು ಆತಂಕ ಸೃಷ್ಟಿಸಿದೆ. ಅಮೆರಿಕದಲ್ಲಿ ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾ ಸೋಂಕು ಹರಡಿರುವುದು ಅಲ್ಲಿನ ಜನರನ್ನು ಆಘಾತಕ್ಕೀಡುಮಾಡಿದೆ. ಈ ಬ್ಯಾಕ್ಟೀರಿಯಾ ಸೋಂಕು ಹರಡಿರುವ ಈರುಳ್ಳಿಯನ್ನ ಸೇವಿಸಿ ಸುಮಾರು 650 ಮಂದಿ ಅಸ್ವಸ್ಥರಾಗಿದ್ದಾರೆ. ಹೀಗಾಗಿ ಇಲ್ಲಿನ ಸರ್ಕಾರ ಮನೆಯಲ್ಲಿರುವ ಈರುಳ್ಳಿಗಳನ್ನ ಬಳಸದಂತೆ ಎಚ್ಚರಿಕೆ ನೀಡಿದೆ. ಅದರಲ್ಲೂ ಸ್ಟಿಕ್ಕರ್ ರಹಿತ ಅಥಾವಾ ಪ್ಯಾಕಿಂಗ್ಮಾಹಿತಿ ಇಲ್ಲದ ಈರುಳ್ಳಿಯನ್ನ ಎಸೆಯೆರಿ ಎಂದು ಸರ್ಕಾರ ಸೂಚನೆ ನೀಡಿದೆ.