Select Your Language

Notifications

webdunia
webdunia
webdunia
webdunia

ನೀರಿನ ಪಾತ್ರೆಯಲ್ಲಿ ಬಿದ್ದು ಒಂದು ವರ್ಷದ ಮಗು ಸಾವು

ಬೆಳಗಾವಿ
ಬೆಳಗಾವಿ : ಮನೆಯಲ್ಲಿ ದಿನನಿತ್ಯದ ಬಳಕೆಗಾಗಿ ತುಂಬಿಸಿಟ್ಟ ನೀರಿನ ಪಾತ್ರೆಯಲ್ಲಿ ಬಿದ್ದು ಒಂದು ವರ್ಷದ ಮಗು ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ನಡೆದಿದೆ.


ಭೀಮರಾವ್ ಮಾಳಗಿ ಮತ್ತು ಸುಗಂಧಾ ಮಾಳಗಿ ದಂಪತಿ ಪುತ್ರ ಮುತ್ತುರಾಜ ಮೃತ ಪಟ್ಟ ಬಾಲಕ. ಮನೆಯವರು ಬೇರೆ ಕೆಲಸದಲ್ಲಿ ತೊಡಗಿದ್ದಾಗ ದಿನನಿತ್ಯದ ಬಳಕೆಗಾಗಿ ತುಂಬಿಸಿಟ್ಟ ನೀರಿನ ಪಾತ್ರೆಯಲ್ಲಿ ಮಗು  ಆಟವಾಡುತ್ತ ತಲೆ ಕೆಳಗಾಗಿ ಮಗುಚಿಬಿದ್ದು ಉಸಿರುಘಟ್ಟಿ ಸ್ಥಳದಲ್ಲೇ  ಸಾವನ್ನಪ್ಪಿದ್ದಾನೆ. ಮಗುವಿನ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಪ್ರಕರಣ ಸದಲಗಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮ ಕಾರನ್ನು ಸುರಕ್ಷಿತವಾಗಿರಿಸುವುದಕ್ಕೆ ಈ ಉಪಕರಣಗಳನ್ನು ಬಳಸಿ....!