Select Your Language

Notifications

webdunia
webdunia
webdunia
webdunia

ಗರ್ಭಿಣಿಯರೇ ವಾಂತಿಯಿಂದ ನರಳುತ್ತಿದ್ದಿರಾ...? ಇಲ್ಲಿದೆ ನೋಡಿ ಅದಕ್ಕೊಂದು ಸರಳ ಪರಿಹಾರ

ಗರ್ಭಿಣಿಯರೇ ವಾಂತಿಯಿಂದ ನರಳುತ್ತಿದ್ದಿರಾ...? ಇಲ್ಲಿದೆ ನೋಡಿ ಅದಕ್ಕೊಂದು ಸರಳ ಪರಿಹಾರ
ಬೆಂಗಳೂರು , ಶನಿವಾರ, 10 ಫೆಬ್ರವರಿ 2018 (06:59 IST)
ಬೆಂಗಳೂರು : ಹೆಚ್ಚಿನ ಮಹಿಳೆಯರು ಗರ್ಭಾವಸ್ಥೆಯಲ್ಲಿ ಅತಿಯಾದ ವಾಂತಿಯಿಂದ ನರಳುತ್ತಾರೆ. ಇದರಿಂದ ಅವರಿಗೆ ಏನನ್ನೂ ತಿನ್ನಲೂ ಆಗುವುದಿಲ್ಲ. ಇದು ಮಗುವಿನ ಮೇಲೂ ಪರಿಣಾಮ ಬೀರುವ ಸಂಭವವಿರುತ್ತದೆ. ಆದ್ದರಿಂದ ಈ ಸಮಸ್ಯೆಗೆ ಇಲ್ಲಿದೆ ಪರಿಹಾರ.


*ಒಂದು ಮುಷ್ಠಿ ನುಗ್ಗೆ ಹೂವಿಗೆ ಸ್ವಲ್ಪ ಬೆಲ್ಲ ಮತ್ತು ಏಲಕ್ಕಿ ಸೇರಿದಿ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಬೇಕು. ಅರ್ಧ ಅಂಶ ಕಷಾಯವನ್ನು ಮಾಡಿ ಶೋಧಿಸಿ ಆರು ಚಮಚದಷ್ಟು ದಿನಕ್ಕೆ ಎರಡು ಬಾರಿಯಂತೆ ಕುಡಿಯಬೇಕು.
*ನೇರಳೆ ಹಣ್ಣಿನ ಶರಬತ್ತನ್ನು ದಿನಕ್ಕೆ ನಾಲ್ಕು ಬಾರಿ ಸೇವಿಸುವುದರಿಂದ ವಾಂತಿ ಹಾಗು ಸುಸ್ತು ಕಡಿಮೆಯಾಗುತ್ತದೆ.
*ಏಲಕ್ಕಿಯ ಒಂದು ಚಿಟಿಕೆ ಪುಡಿಯನ್ನು ಜೇನುತುಪ್ಪದ ಜೊತೆ ಸೇರಿಸಿ ಸೇವಿಸಬೇಕು.
*ಖಾಲಿ ಹೊಟ್ಟೆಯಲ್ಲಿ ಹಸಿ ಶುಂಠಿಯ 10-15 ಹನಿರಸ ಒಂದು ಚಮಚ ಜೇನು ತುಪ್ಪದಲ್ಲಿ ಸೇವಿಸಬೇಕು. ದಾಳಿಂಬೆ ರಸಕ್ಕೆ ಸ್ವಲ್ಪ ಲವಂಗದ ಪುಡಿ ಸೇರಿಸಿ ಬೆಳಿಗ್ಗೆ ಖಾಲಿ ಹೊಟ್ಟೆಗೆ ಸೇವಿಸಬೇಕು.


 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪ್ರೇಮಿಗಳ ದಿನದಂದು ನಿಮ್ಮ ಪ್ರಿಯತಮೆಗೆ ಹೇಗೆಲ್ಲಾ ಅಚ್ಚರಿಗೊಳಿಸಬಹುದು!