Select Your Language

Notifications

webdunia
webdunia
webdunia
webdunia

ಪ್ರೇಮಿಗಳ ದಿನದಂದು ನಿಮ್ಮ ಪ್ರಿಯತಮೆಗೆ ಹೇಗೆಲ್ಲಾ ಅಚ್ಚರಿಗೊಳಿಸಬಹುದು!

ಪ್ರೇಮಿಗಳ ದಿನದಂದು ನಿಮ್ಮ ಪ್ರಿಯತಮೆಗೆ ಹೇಗೆಲ್ಲಾ ಅಚ್ಚರಿಗೊಳಿಸಬಹುದು!

ರಾಮಕೃಷ್ಣ ಪುರಾಣಿಕ

ಬೆಂಗಳೂರು , ಶುಕ್ರವಾರ, 9 ಫೆಬ್ರವರಿ 2018 (18:29 IST)
ಪ್ರೀತಿಯಲ್ಲಿರುವ ಜನರಿಗೆ ಪ್ರತಿ ದಿನವೂ ಪ್ರೇಮಿಗಳ ದಿನವೇ, ಆದರೆ ವರ್ಷದ ಈ ಒಂದು ದಿನ ನಿಮ್ಮ ಪ್ರೀತಿಯನ್ನು ಹೆಚ್ಚು ಅನುಭವಿಸಲು ಮತ್ತು ಸಂಭ್ರಮಿಸಲು ಈ ದಿನ ಸೂಕ್ತವಾಗಿದೆ. ಈ ವಿಶೇಷ ದಿನವು ಹತ್ತಿರವಾಗುತ್ತಿದೆ, ಅದಕ್ಕಾಗಿ ನಿಮ್ಮ ಪ್ರಿಯತಮೆಯನ್ನು ಅಚ್ಚರಿಗೊಳಿಸಲು ಮತ್ತು ಈ ದಿನವನ್ನು ಅವರಿಗಾಗಿ ವಿಶೇಷವಾಗಿರಿಸಲು ನಾವು ಕೆಲವು ವಿಶೇಷ ಸಲಹೆಗಳನ್ನು ನಿಮಗಾಗಿ ನೀಡುತ್ತಿದ್ದೇವೆ.
ನಿಮ್ಮ ಪ್ರಿಯತಮೆಯನ್ನು ದೂರದ ಸ್ಥಳಕ್ಕೆ ಕರೆದುಕೊಂಡು ಹೋಗಿ
 
ನಿಮ್ಮ ಪ್ರಿಯತಮೆಯನ್ನು ಅಚ್ಚರಿಗೊಳಿಸಲು ಸುಂದರವಾಗಿರುವಂತಹ ದೂರದ ಸ್ಥಳಕ್ಕೆ ಕರೆದುಕೊಂಡು ಹೋಗುವುದು ಒಂದು ಉತ್ತಮ ಸಲಹೆಯಾಗಿದೆ. ನೀವು ಕರೆದುಕೊಂಡು ಹೋಗುವ ಸ್ಥಳವು ಆಡಂಬರದಿಂದ ಕೂಡಿರದೇ, ಸೂಕ್ತ ರೀತಿಯ ಪರಿಸರವನ್ನು ಹೊಂದಿರಬೇಕು. ಸೂರ್ಯಾಸ್ತದ ನೋಟವನ್ನು ಹೊಂದಿರುವ ಲೇಕ್‌ಸೈಡ್ ರೆಸಾರ್ಟ್ ಅಥವಾ ರೆಸ್ಟೋರೆಂಟ್‌ಗೆ ಕರೆದುಕೊಂಡು ಹೋಗಿ, ಇವು ಇಂತಹ ಸಂದರ್ಭಗಳಿಗೆ ಸೂಕ್ತವಾಗಿರುತ್ತವೆ.
 
ವಿಭಿನ್ನ ರೀತಿಯಲ್ಲಿ ಉಂಗುರವನ್ನು ತೊಡಿಸಿ
 
ವಿಭಿನ್ನ ರೀತಿಯಲ್ಲಿ ಉಂಗುರ ತೊಡಿಸುವ ಮೂಲಕ ಪ್ರೀತಿಯ ಪ್ರಸ್ತಾಪ ಮಾಡುವುದನ್ನು ನೀವು ನೋಡಿರಬಹುದು. ಇದು ಒಂದು ರೀತಿಯಲ್ಲಿ ಕ್ಲೀಷೆ ಎಂದೆನಿಸಬಹುದು, ಆದರೆ ನಿಮ್ಮ ಪ್ರಿಯತಮೆಯನ್ನು ಓಲೈಸಲು ನೀವು ಇದನ್ನು ಪ್ರಯತ್ನಿಸಬೇಕು. ನೀವು ತುಂಬಾ ಚಿತ್ತಾಕರ್ಷಕರಾಗಿರುವಿರಿ ಎಂದು ಅವರು ಭಾವಿಸಬಹುದು ಆದರೂ ಪರವಾಗಿಲ್ಲ! ನಿಮ್ಮ ಪ್ರಿಯತಮೆಯನ್ನು ಸಂತೋಷವಾಗಿಡುವುದಕ್ಕಿಂತ ಹೆಚ್ಚಿನ ಸಂತೋಷ ಯಾವುದೂ ಇಲ್ಲ.
 
ಕರೋಕೆ ನೈಟ್‌ಗೆ ಕರೆದೊಯ್ಯಿರಿ
 
ಇತ್ತೀಚಿಗೆ ಜಗತ್ತಿನಾದ್ಯಂತ ಕರೋಕೆ ನೈಟ್ ತುಂಬಾ ಜನಪ್ರಿಯವಾಗುತ್ತಿದೆ. ನಿಮ್ಮ ಪ್ರಿಯತಮೆಯನ್ನು ರಾತ್ರಿಯ ಭೋಜನಕ್ಕಾಗಿ ಹೊರಗಡೆ ಕರೆದುಕೊಂಡು ಹೋಗಲು ನಿರ್ಧರಿಸಿದಾಗ, ಕರೋಕೆ ಆಯ್ಕೆಯುಳ್ಳ ರೆಸ್ಟೋರೆಂಟ್ ಅನ್ನು ಆಯ್ಕೆ ಮಾಡಲು ಮರೆಯದಿರಿ. ನೀವು ಗಾಯಕರಾಗಿರಿ ಅಥವಾ ಆಗಿರದೇ ಇರಿ, ನೀವು ಯಾವಾಗಲೂ ಮೈಕ್ ಅನ್ನು ಹಿಡಿದು ಅವರ ನೆಚ್ಚಿನ ಹಾಡನ್ನು ಹಾಡಬಹುದು.
 
ಪ್ರೀತಿಭರಿತ ಪತ್ರವನ್ನು ಬರೆಯಿರಿ
 
ಇದು ಹುಡುಗರು ಮಾಡುವ ತುಂಬಾ ಸರಳ ವಿಧಾನ. ನಿಮ್ಮ ಹತ್ತಿರ ಉಡುಗೊರೆ ಇರಲಿ ಅಥವಾ ಇಲ್ಲದಿರಲಿ, ನಿಮ್ಮ ಪ್ರಿಯತಮೆಗಾಗಿ ಸುಂದರವಾದ ಪ್ರೀತಿ ತುಂಬಿದ ಪತ್ರವನ್ನು ಬರೆಯಬಹುದು. ಕಾಗದದ ಮೇಲೆ ನಿಮ್ಮ ಮನಸ್ಸಿನ ಇಂಗಿತವನ್ನು ಸುರಿಯುವ ಮೂಲಕ ಪ್ರಿಯತಮೆಯ ಮೊಗದಲ್ಲಿ ಸಂತೋಷ ಮೂಡಿಸುವುದು ಅತೀ ಪರಿಶುದ್ಧವಾದ ಮಾರ್ಗ. ಈ ಯೋಚನೆ ಹಳೆಯದಾಗಿ ಕಂಡರೂ, ಭಾವನೆ ಭರಿತ ಕೈಬರಹದ ಪತ್ರಕ್ಕೆ ಯಾವ ಹೋಲಿಕೆಯೂ ಇಲ್ಲ.
 
ವೈಯಕ್ತಿಕಗೊಳಿಸಿದ ಉಡುಗೊರೆಗಳನ್ನು ನೀಡಿ
 
ಮಾರುಕಟ್ಟೆಯಿಂದ ಖರೀದಿಸಿದ ಅತ್ಯಂತ ದುಬಾರಿಯಾದ ಉಡುಗೊರೆಗಳನ್ನು ನೀಡುವುದಕ್ಕಿಂದ, ವೈಯಕ್ತಿಕವಾಗಿ ಇಷ್ಟವಾಗುವ ಉಡುಗೊರೆಗಳನ್ನು ಆರಿಸಿಕೊಳ್ಳಿ. ವೈಯಕ್ತಿಕಗೊಳಿಸಿದ ಉತ್ಪನ್ನಗಳನ್ನು ಮಾರಾಟ ಮಾಡುವ ಹಲವಾರು ವೆಬ್‌ಸೈಟ್‌ಗಳಿವೆ. ಅದು ಫೋಟೋ ಡೈರಿಯೇ ಆಗಿರಲಿ, ಸ್ಮಾರಕಗಳಾಗಿರಲಿ ಅಥವಾ ಮರದ ತುಂಡಿನ ಮೇಲೆ ನೀವು ಬರೆದ ಸುಂದರ ಕವನವಾಗಿರಬಹುದು, ಇಂತಹ ಉಡುಗೊರೆಗಳು ಯಾವಾಗಲೂ ಬಯಸಿದ್ದಕ್ಕಿಂತ ಹೆಚ್ಚಿನ ಪ್ರಭಾವ ಬೀರುತ್ತವೆ.
 
ಒಟ್ಟಾಗಿ ಹೇಳುವುದಾದರೆ ನಿಮ್ಮ ಪ್ರೀತಿಪಾತ್ರರನ್ನು ಓಲೈಸಲು ನೀವು ಮೇಲಿನ ಮಾರ್ಗಗಳನ್ನು ಅನುಸರಿಸಿ, ನಿಮ್ಮ ಪ್ರೀತಿ ಚಿರಾಯು ಆಗಿರಲಿ ಎಂಬುವುದೇ ನಮ್ಮ ಆಶಯ.

Share this Story:

Follow Webdunia kannada

ಮುಂದಿನ ಸುದ್ದಿ

ರುಚಿ ರುಚಿಯಾದ ಬೀಟ್ ರೂಟ್ ರಸಂ ಸವಿದಿದ್ದೀರಾ...?