Publish Date: Thu, 27 Jul 2017 (16:22 IST)
Updated Date: Thu, 27 Jul 2017 (16:25 IST)
ಪ್ರಿಯತಮೆಯೊಂದಿಗೆ ಮದುವೆಯಾಗುವುದನ್ನು ತಪ್ಪಿಸಲು ಪಿತೂರಿ ನಡೆಸಿದ ಆರೋಪದ ಮೇಲೆ ಕಾಲೇಜು ವಿದ್ಯಾರ್ಥಿಯನ್ನು ಬಂಧಿಸಲಾಗಿದೆ.
ಆರೋಪಿ ವಿದ್ಯಾರ್ಥಿ, ಗೆಳೆಯರು ಆಕೆಯ ಮೇಲೆ ಅತ್ಯಾಚಾರವೆಸಗಿದಲ್ಲಿ ತಾನು ಆಕೆಯಿಂದ ದೂರವಾಗಬಹುದು ಎನ್ನುವ ಪಿತೂರಿ ನಡೆಸಿ, ತನ್ನ ಇಬ್ಬರು ಗೆಳೆಯರಿಗೆ ಪ್ರಿಯತಮೆಯ ಮೇಲೆ ಅತ್ಯಾಚಾರವೆಸಗುವಂತೆ ಪ್ರೇರೇಪಿಸಿದ್ದಾನೆ.
ಪೋಷಕರನ್ನು ಭೇಟಿ ಮಾಡಿಸುತ್ತೇನೆ ಎನ್ನುವ ನೆಪವೊಡ್ಡಿ ಪ್ರಿಯಕರ ಹರಪ್ರೀತ್ ಸಿಂಗ್, ನನ್ನನ್ನು ಕರೆದುಕೊಂಡು ಹೋಗಿದ್ದ. ಆದರೆ, ಮಾರ್ಗ ಮಧ್ಯದಲ್ಲಿಯೇ ಪೋಷಕರನ್ನು ಕರೆದುಕೊಂಡು ಬರುತ್ತೇನೆ ಇಲ್ಲಿಯೇ ಕಾಯುತ್ತಾ ಇರು ಎಂದು ಹೇಳಿ ತೆರಳಿದ್ದಾನೆ. ಆದರೆ, ಸ್ವಲ್ಪ ಸಮಯದಲ್ಲಿಯೇ ಆತನ ಇಬ್ಬರು ಗೆಳೆಯರು ಬಂದು ನನ್ನನ್ನು ನಿರ್ಜನ ಪ್ರದೇಶದಲ್ಲಿರುವ ಮನೆಯೊಂದಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾರೆ ಎಂದು ಯುವತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ.
ಆಸ್ಪತ್ರೆಯಲ್ಲಿ ಯುವತಿಯ ಮೇಲೆ ಅತ್ಯಾಚಾರ ನಡೆದಿರುವುದು ಧೃಢಪಟ್ಟಿದೆ. ಆರೋಪಿ ಹರಪ್ರೀತ್ ಸಿಂಗ್‌ನನ್ನು ಈಗಾಗಲೇ ಬಂಧಿಸಲಾಗಿದ್ದು, ಇತರ ಇಬ್ಬರು ಆರೋಪಿಗಳಾದ ರವಿ ಮತ್ತು ಬಿಂದುನನ್ನು ಶೀಘ್ರದಲ್ಲಿಯೇ ಬಂಧಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.