Select Your Language

Notifications

webdunia
webdunia
webdunia
webdunia

ನಿಮ್ಮ ಕಾರನ್ನು ಸುರಕ್ಷಿತವಾಗಿರಿಸುವುದಕ್ಕೆ ಈ ಉಪಕರಣಗಳನ್ನು ಬಳಸಿ....!

ನಿಮ್ಮ ಕಾರನ್ನು ಸುರಕ್ಷಿತವಾಗಿರಿಸುವುದಕ್ಕೆ ಈ ಉಪಕರಣಗಳನ್ನು ಬಳಸಿ....!

ಗುರುಮೂರ್ತಿ

ಬೆಂಗಳೂರು , ಸೋಮವಾರ, 12 ಫೆಬ್ರವರಿ 2018 (17:35 IST)
ನಿಮಗೆ ಕಾರುಗಳ ಕುರಿತು ಕಾಳಜಿ ಇದೆಯೇ, ನೀವು ಕಾರಿನಲ್ಲಿ ದೂರದ ಊರುಗಳಿಗೆ ಹೋಗಲು ಬಯಸಿದ್ದೀರಾ ಅಥವಾ ನೀವು ಹೆಚ್ಚಾಗಿ ಕಾರುಗಳಲ್ಲಿ ಪ್ರಯಾಣಿಸುತ್ತಿರುತ್ತೀರಾ ಹಾಗಾದರೆ ನಿಮ್ಮನ್ನು ಮತ್ತು ನಿಮ್ಮ ಕಾರನ್ನು ಸುರಕ್ಷಿತವಾಗಿರಿಸಲು ನೀವು ಇದನ್ನು ಮಾಡಲೇಬೇಕು ಏನಪ್ಪಾ ಮಾಡೋದು ಅಂತಾ ಯೋಚಿಸ್ತಿದ್ದೀರಾ ಇಲ್ಲಿದೆ ಮಾಹಿತಿ.
 
ನೀವು ಕಾರು ಪ್ರಿಯರಾಗಿದ್ದಲ್ಲಿ, ಇಲ್ಲವೇ ನಿಮಗೆ ಕಾರಿನಲ್ಲಿ ದೂರದ ಊರುಗಳಿಗೆ ಪ್ರಯಾಣಿಸುವ ಹವ್ಯಾಸವಿದ್ದಲ್ಲಿ, ನಿಮ್ಮ ಕಾರನ್ನು ಸುರಕ್ಷಿತವಾಗಿರುವಂತೆ ನೋಡಿಕೊಳ್ಳುವುದು ತುಂಬಾನೇ ಮುಖ್ಯ. ನಿಮ್ಮ ಕಾರಿನಲ್ಲಿ ನೀವು ಏನನ್ನು ಹೊಂದಿರಬೇಕು ಎಂಬುದನ್ನು ನಾವು ನಿಮಗೆ ತಿಳಿಸುತ್ತೇವೆ ಈ ವಸ್ತುಗಳು ನಿಮ್ಮ ಕಾರಿನಲ್ಲಿ ಇದ್ದಲ್ಲಿ ನಿಮ್ಮ ಪ್ರಯಾಣ ಸುಖಮಯವಾಗಿರುವುದರಲ್ಲಿ ಯಾವುದೇ ಸಂದೇಹವಿಲ್ಲ ಅಲ್ಲದೇ ನಿಮ್ಮ ಕಾರು ಕೂಡಾ ಸುರಕ್ಷಿತವಾಗಿರುತ್ತದೆ.
 
ಇತ್ತೀಚಿನ ದಿನಗಳಲ್ಲಿ ಕಾರು ಅಪಘಾತಗಳು, ಕಳ್ಳತನಗಳು ಆಗುತ್ತಿರುವುದು ಸರ್ವೇ ಸಾಮಾನ್ಯವಾಗಿದೆ. ನೀವು ಎಲ್ಲೋ ದೂರದ ಊರಿಗೆ ಹೋಗುತ್ತಿರುತ್ತೀರಿ ಆಗ ಆಕಸ್ಮಿಕವಾಗಿ ನೀವು ತೊಂದರೆಗೆ ಒಳಗಾಗಬಹುದು ಅಂತಹ ಸಂದರ್ಭದಲ್ಲಿ ನಾವು ಹೇಳುವ ಉಪಕರಣಗಳು ನಿಮ್ಮ ಬಳಿ ಇದ್ದಲ್ಲಿ ನಿಮಗೆ ಸಹಾಯಕಾರಿಯಾಗಬಲ್ಲವು, ಅಲ್ಲದೇ ಕೆಲವು ಅಪಾಯಗಳಿಂದ ರಕ್ಷಣೆಯನ್ನು ಪಡೆದುಕೊಳ್ಳಬಹುದು.
 
ರಿವರ್ಸ್ ಪಾರ್ಕಿಂಗ್ ಸೆನ್ಸಾರ್
ನಿಮ್ಮ ಕಾರಿಗೆ ನೀವು ಈ ರಿವರ್ಸ್ ಪಾರ್ಕಿಂಗ್ ಸೆನ್ಸಾರ್‌ ಅನ್ನು ಅಳವಡಿಸಿದಲ್ಲಿ, ನೀವು ಪಾರ್ಕಿಂಗ್ ಮಾಡುವಾಗ ಇಲ್ಲವೇ ಕಾರನ್ನು ಹಿಂತೆಗೆಯುವಾಗ ಕಲ್ಲುಗಳೋ ಅಥವಾ ಬೇರೆ ಯಾವುದೇ ವಸ್ತುಗಳು ನಿಮ್ಮ ಕಾರಿನ ಹಿಂಬದಿಯಲ್ಲಿದ್ದರೆ ಈ ಸೆನ್ಸಾರ್ ಸ್ವಯಂಚಾಲಿತವಾಗಿ ಕಾರ್ಯಾರಂಭಗೊಂಡು ಅಲ್ಟ್ರಾಸೋನಿಕ್ ರೇಡಿಯೊ ವೇವ್ ಮೂಲಕ ಸೂಚನೆ ನೀಡುತ್ತದೆ. ಈ ಮೂಲಕ ನಿಮ್ಮ ಕಾರನ್ನು ಅಪಾಯದಿಂದ ರಕ್ಷಿಸಿಕೊಳ್ಳಬಹುದು. ಇದನ್ನು ಎಲ್ಲಾ ರೀತಿಯ ಕಾರುಗಳಿಗೂ ಅಳವಡಿಸಬಹುದಾಗಿದೆ. ಇದರ ಬೆಲೆ ಕನಿಷ್ಟ 2500 ಇದ್ದು ಹೆಚ್ಚಿನ ಬೆಲೆಯ ಸೆನ್ಸಾರ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.
 
ಲೈಫ್ ಹ್ಯಾಮರ್
webdunia
ನೀವು ಎಲ್ಲಿಯಾದರೂ ಪ್ರಯಾಣಿಸುತ್ತಿರುವ ಸಂದರ್ಭದಲ್ಲಿ ಅಪಘಾತವಾಗಬಹುದು ಇಲ್ಲವೇ ನಿಮ್ಮ ಕಾರು ನೀರಿನಲ್ಲಿ ಮುಳುಗಡೆಯಾಗಬಹುದು ಅಂತಹ ಸಂದರ್ಭದಲ್ಲಿ ಕಾರಿನಿಂದ ಹೊರಬರಲು ಈ ಲೈಫ್ ಹ್ಯಾಮರ್‌ಗಳು ತುಂಬಾನೇ ಉಪಯೋಗಕಾರಿಯಾಗಿವೆ. ಇವು ನೋಡಲು ಚಿಕ್ಕದಾಗಿದ್ದು ಇದರಿಂದ ಕಾರಿನ ಗಾಜನ್ನು ಸುಲಭವಾಗಿ ಒಡೆದು ಹಾಕಬಹುದಾಗಿದೆ ಮತ್ತು ಸೀಟ್ ಬೆಲ್ಟುಗಳನ್ನು ಸುಲಭವಾಗಿ ಕತ್ತರಿಸಬಹುದಾಗಿದೆ ಆ ಮೂಲಕ ನೀವು ಸುಲಭವಾಗಿ ಕಾರಿನಿಂದ ಹೊರಬರಬಹುದು. ಇದು ಮಾರುಕಟ್ಟೆಯಲ್ಲಿ ಲಭ್ಯವಿದ್ದು ಇದರ ಪ್ರಾರಂಭಿಕ ಬೆಲೆ 500 ಇದ್ದು 5000 ಕ್ಕಿಂತಲೂ ಹೆಚ್ಚಿನ ದರದ ಲೈಫ್ ಹ್ಯಾಮರ್‌ಗಳನ್ನು ನಾವು ಕಾಣಬಹುದಾಗಿದೆ.
 
GPS ನ್ಯಾವಿಗೇಟರ್ 
webdunia
GPS ನ್ಯಾವಿಗೇಟರ್ ಕೆಲವು ಕಾರುಗಳಲ್ಲಿ ಲಭ್ಯವಿರುತ್ತಾದರೂ ಕೆಲವರು ಇದನ್ನು ವಿಶೇಷವಾಗಿ ಅಳವಡಿಸುತ್ತಾರೆ. ಇದರಲ್ಲಿ ಕಾರು ಕಳುವಾದಾಗ ಸುಲಭವಾಗಿ ಪತ್ತೆ ಹಚ್ಚಬಹುದಾದ ಸ್ವಾಫ್ಟ್‌ವೇರ್ ಅಳವಡಿಸಲಾಗಿರುತ್ತದೆ ಇದರ ಮೂಲಕ ನಿಮ್ಮ ಕಾರು ಯಾವ ಸ್ಥಳದಲ್ಲಿ ಚಲಿಸುತ್ತಿದೆ ಎಂಬುದನ್ನು ನೀವು ಕುಳಿತಲ್ಲಿಯೇ ಪತ್ತೆಹಚ್ಚಬಹುದು. ಅಷ್ಟೇ ಅಲ್ಲ ಈ ನ್ಯಾವಿಗೇಟರ್ ಸಿಮ್ ಇಲ್ಲದೆಯೇ ಕಾರ್ಯನಿರ್ವಹಿಸುವ ಕಾರಣ ನೆಟ್‌ವರ್ಕ್ ವ್ಯಾಪ್ತಿಯಿಂದ ಹೊರಗಿರುವ ಪ್ರದೇಶದಲ್ಲೂ ಸಹ ನಾವು ಇದರ ಮೂಲಕ ಸುಲಭವಾಗಿ ರಸ್ತೆಯನ್ನು ಹುಡುಕಬಹುದಾಗಿದೆ. ಇದರ ಪ್ರಾರಂಭಿಕ ಬೆಲೆ 4500 ಇದ್ದು 50000 ಕ್ಕೂ ಹೆಚ್ಚಿನ ದರದ GPS ನ್ಯಾವಿಗೇಟರ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.
 
ಕನ್ವೆಕ್ಸ್ ಮಿರರ್
webdunia
ನೀವು ಕಾರಿನ್ನು ಚಲಾಯಿಸುವಾಗ ಹಿಂಬದಿಯ ಸಂಪೂರ್ಣ ನೋಟವನ್ನು ವೀಕ್ಷಿಸಲು ಈ ಮಿರರ್ ನಿಮಗೆ ಸಹಾಯಕಾರಿಯಾಗಿದೆ. ಇದರ ಮೂಲಕ ನಾವು ಹೈವೇಗಳಲ್ಲಿ ಕಾರುಗಳನ್ನು ಸುಲಭವಾಗಿ ಓಡಿಸಬಹುದು. ಇದನ್ನು ಕಾರಿನ ಎಡಭಾಗದ ಮಿರರ್ ಮತ್ತು ಬಲಭಾಗದ ಮಿರರ್‌ನಲ್ಲಿ ಸುಲಭವಾಗಿ ಅಳವಡಿಸಬಹುದಾಗಿದ್ದು, ಇದರ ಪ್ರಾರಂಭಿಕ ಬೆಲೆಯು 150 ರೂಪಾಯಿಯಿಂದ 500 ರೂಪಾಯಿಯವರೆಗೆ ಇದೆ. ಇದನ್ನು ನಾವು ಮಾರುಕಟ್ಟೆಯಲ್ಲಿ ಖರೀದಿಸಬಹುದಾಗಿದೆ. 
 
ಗೇರ್ ಲಾಕ್
webdunia
ಇತ್ತೀಚಿಗೆ ನಗರ ಪ್ರದೇಶಗಳಲ್ಲಿ ಕಾರು ಕಳ್ಳತನದ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಅದಕ್ಕೆ ಒಂದು ಉತ್ತಮ ಉಪಾಯವನ್ನು ಕಂಡುಕೊಳ್ಳಲಾಗಿದೆ ಅದೇ ಈ ಗೇರ್ ಲಾಕ್. ಹೌದು ನಿಮ್ಮ ಕಾರಿನ ಡೋರ್ ಅನ್ನು ನಕಲಿ ಕೀ ಬಳಸಿ ತೆರೆದರು ಕಾರನ್ನು ಓಡಿಸಲು ಸಾಧ್ಯವಾಗದ ರೀತಿಯಲ್ಲಿ ಈ ಉಪಕರಣವನ್ನು ರೂಪಿಸಲಾಗಿದೆ. ಇದನ್ನು ನೀವು ಪಾರ್ಕ್ ಮಾಡುವಾಗ ನಿಮ್ಮ ಕಾರಿನ ಗೇರ್ ಲಿವರ್ ತುದಿ ಮತ್ತು ಕಾರಿನ ಹ್ಯಾಂಡ್ ಬ್ರೇಕ್ ತುದಿಗೆ ಗೇರ್ ಲಾಕ್ ಅನ್ನು ಒಟ್ಟಿಗೆ ಜೋಡಿಸುವ ಮೂಲಕ ನಿಮ್ಮ ಕಾರನ್ನು ಸುರಕ್ಷಿತವಾಗಿರಿಸಬಹುದು. ಇದರಿಂದ ಕಾರನ್ನು ಚಲಾಯಿಸಲು ಸಾಧ್ಯವಾಗುವುದಿಲ್ಲ ಏಕೆಂದರೆ ಗೇರ್ ಲಿವರ್ ಮತ್ತು ಹ್ಯಾಂಡ್ ಬ್ರೇಕ್ ಅನ್ನು ತೆಗೆಯದೇ ಕಾರನ್ನು ಓಡಿಸಲು ಸಾಧ್ಯವಾಗುವುದಿಲ್ಲ ಆದ ಕಾರಣ ಗೊತ್ತಿಲ್ಲದಿರುವ ಪ್ರದೇಶಕ್ಕೆ ತೆರಳುವಂತ ಸಂದರ್ಭದಲ್ಲಿ, ಇಲ್ಲವೇ ರಾತ್ರಿ ಹೊತ್ತು ಪಾರ್ಕ್ ಮಾಡಿದಾಗ ಇದನ್ನು ಅಳವಡಿಸುವ ಮೂಲಕ ನಿಮ್ಮ ಕಾರನ್ನು ನೀವು ಸುರಕ್ಷಿತವಾಗಿರಿಸಬಹುದು.
 
ಪ್ರತಿಫಲಿತ ಟೇಪ್ 
webdunia
ನೀವು ಕಾರಿನಲ್ಲಿ ರಾತ್ರಿ ಹೊತ್ತು ಪ್ರಯಾಣಿಸುತ್ತಿರುತ್ತೀರಿ ಅಂತಹ ಸಮಯದಲ್ಲಿ ನೀವು ಎಷ್ಟು ಸುರಕ್ಷಿತವಾಗಿ ಕಾರು ಚಲಾಯಿಸಿದರು ಕೆಲವೊಮ್ಮೆ ಹಿಂಬದಿ ಸವಾರರು ನಮ್ಮ ಕಾರಿಗೆ ಬಂದು ಗುದ್ದಿರುತ್ತಾರೆ. ಅದು ನಿಮಗೂ ಸಹ ಅನುಭವವಾಗಿರಬಹುದು ಇಲ್ಲವೇ ಮಾಧ್ಯಮಗಳಲ್ಲಿ ನೀವು ಕೇಳಿರಲೂಬಹುದು. ಅದಕ್ಕೆ ಕಾರಣಗಳು ಇದೆ ನೀವು ರಾತ್ರಿ ಹೊತ್ತು ಕಾರಿನಲ್ಲಿ ಪ್ರಯಾಣಿಸುವಾಗ ಕೆಲವೊಮ್ಮೆ ಹಿಂಬದಿ ಸವಾರರಿಗೆ ಮುಂದೆ ರಸ್ತೆಯಲ್ಲಿರುವ ಸಾಗುತ್ತಿರುವ ನಿಮ್ಮ ಕಾರು ಸರಿಯಾಗಿ ಗೋಚರಿಸದೇ ಇರಬಹುದು, ಅಲ್ಲದೇ ಕೆಲವು ಕಾರಿನ ಬಣ್ಣಗಳು ಮಂದವಾಗಿರುವುದರಿಂದ ಸರಿಯಾಗಿ ಗೋಚರವಾಗುವುದಿಲ್ಲ ಉದಾ ನಿಮ್ಮ ಕಾರಿನ ಬಣ್ಣ ಕಪ್ಪು ಎಂದಿಟ್ಟುಕೊಂಡರೆ ಹೈವೇಯಲ್ಲಿ ನೀವು ಕಾರನ್ನು ಚಲಾಯಿಸುವಾಗ ನಿಮ್ಮ ಕಾರಿನ ಬಣ್ಣ ಶೀಘ್ರವಾಗಿ ಗೋಚರವಾಗುವುದಿಲ್ಲ ಅದಕ್ಕಾಗಿಯೇ ನೀವು ಕಾರಿನ ಹಿಂಭಾಗದಲ್ಲಿ ಕೆಂಪು ಬಣ್ಣದ ತ್ರಿಕೋನಾಕೃತಿ ಅಥವಾ ಪಟ್ಟೆಯಾಕಾರದ ಪ್ರತಿಫಲಿಸುವ ಟೇಪ್ ಲಗತ್ತಿಸುವ ಮೂಲಕ ರಾತ್ರಿ ಪಯಣವನ್ನು ಮತ್ತಷ್ಟು ಸುರಕ್ಷಿತವಾಗಿಸಬಹುದು ಇದನ್ನು ಅಳವಡಿಸುವುದರಿಂದ ನಿಮ್ಮ ಕಾರುಗಳು ದೂರದಲ್ಲಿರುವಾಗಲೇ ಸುಲಭವಾಗಿ ಹಿಂಬದಿ ಸವಾರರಿಗೆ ಗೋಚರವಾಗುತ್ತದೆ ಇದರಿಂದ ಅಪಘಾತವಾಗುವುದನ್ನು ಸುಲಭವಾಗಿ ತಪ್ಪಿಸಲು ಇದು ಸಹಾಯಕಾರಿಯಾಗಿದೆ.
 
ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ
webdunia
ರಿವರ್ಸ್ ಪಾರ್ಕಿಂಗ್ ಕ್ಯಾಮೆರಾವನ್ನು ನೀವು ಕಾರಿನಲ್ಲಿ ಅಳವಡಿಸಿಕೊಂಡರೆ ನಿಮ್ಮ ಕಾರಿನಲ್ಲಿರುವ ಕ್ಯಾಮರಾ ಪರದೆಯ ಮೂಲಕ ನೀವು ಆರಾಮವಾಗಿ ನಿಮ್ಮ ಕಾರನ್ನು ಪಾರ್ಕ್ ಮಾಡಬಹುದಾಗಿದೆ. ಅಲ್ಲದೇ ಟ್ರಾಫಿಕ್‌ಗಳಲ್ಲಿ, ಇಲ್ಲವೇ ಜನದಟ್ಟಣೆ ಇರುವ ಪ್ರದೇಶಗಳಲ್ಲಿ ಕಾರುಗಳನ್ನು ಪಾರ್ಕ್ ಮಾಡುವಾಗ ಈ ಉಪಕರಣ ತುಂಬಾ ಉಪಯೋಗಕಾರಿಯಾಗಿದೆ. ಇದನ್ನು ನೀವು ಮುಂಬದಿಯಲ್ಲೂ ಅಳವಡಿಸಬಹುದಾಗಿದ್ದು ರಾತ್ರಿ ಸಮಯದಲ್ಲಿ ನೀವು ಕಾರು ಪ್ರಯಾಣ ಮಾಡುವಾಗ ಯಾರಾದರೂ ಅಪರಿಚಿತರಿಂದ ತೊಂದರೆಗೆ ಒಳಗಾದಲ್ಲಿ ಅವರನ್ನು ಪತ್ತೆಹಚ್ಚಲು ಈ ಪಾರ್ಕಿಂಗ್ ಕ್ಯಾಮರಾಗಳು ಉಪಯೋಗಕಾರಿಯಾಗಿದೆ. ಮಾರುಕಟ್ಟೆಯಲ್ಲಿ ಈ ಉಪಕರಣದ ಕನಿಷ್ಟ ದರವು 3500 ಇದ್ದು ಆಯಾ ಕಂಪನಿ ಮತ್ತು ಆ ಉಪಕರಣದ ಗುಣಮಟ್ಟದ ಆಧಾರದ ಮೇಲೆ ಬೆಲೆಯಲ್ಲಿ ವ್ಯತ್ಯಾಸವಾಗುತ್ತವೆ. ಇತ್ತೀಚಿಗೆ ಹೈಯರ್ ಹ್ಯಾಂಡ್ ಕಾರುಗಳಲ್ಲಿ ಮುಂಚಿತವಾಗಿಯೇ ಈ ಉಪಕರಣವನ್ನು ಅಳವಡಿಸಲಾಗಿರುತ್ತದೆ. ಒಂದು ವೇಳೆ ನಿಮ್ಮ ಕಾರುಗಳಲ್ಲಿ ಈ ಸೌಲಭ್ಯವಿಲ್ಲದಿದ್ದಲ್ಲಿ ನೀವು ಹೆಚ್ಚುವರಿಯಾಗಿ ಅಳವಡಿಸಿಕೊಳ್ಳಬಹುದು.
 
ಮೊಬೈಲ್ ಹೊಲ್ಡರ್ 
webdunia
ನಾವು ಯಾವುದಾದರೂ ಊರುಗಳಿಗೆ ಹೊಸದಾಗಿ ಪ್ರಯಾಣ ಮಾಡುತ್ತಿದ್ದಲ್ಲಿ ದಾರಿಯನ್ನು ಹುಡುಕಲು ಮೊಬೈಲ್ ಮೊರೆ ಹೋಗುವುದು ಸಾಮಾನ್ಯವಾಗಿದೆ. ಇದರಿಂದ ಅಪಘಾತಗಳು ಸಂಭವಿಸಬಹುದು. ಆದ ಕಾರಣ ನೀವು ಮೊಬೈಲ್ ಹೋಲ್ಡರ್ ಅನ್ನು ಕಾರಿಗೆ ಲಗತ್ತಿಸುವ ಮೂಲಕ ನಿಮ್ಮ ಮೊಬೈಲ್ ಅನ್ನು ಅದಕ್ಕೆ ಜೋಡಿಸಿ ಸುಲಭವಾಗಿ ವೀಕ್ಷಿಸಲು ಇದು ಸಹಾಯಮಾಡುತ್ತದೆ. ಇದರ ದರವು 50 ರೂಪಾಯಿಯಿಂದ 500 ವರೆಗೆ ಇದ್ದು ಮಾರುಕಟ್ಟೆಯಲ್ಲಿ ನಿಮಗೆ ಲಭ್ಯವಿದೆ.
 
ತುರ್ತು ಪರಿಸ್ಥಿತಿ ಪರಿಕರಗಳು
webdunia
ಕಾರಿನಲ್ಲಿ ಕೆಲವು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಬಳಸಬಹುದಾದ ಪರಿಕರಗಳಿರುತ್ತವೆ ಅವುಗಳಲ್ಲಿ ಮುಖ್ಯವಾಗಿ ಸ್ಪೇರ್ ವೀಲ್, ಕಾರ್ ಜಾಕ್, ವೀಲ್ ಸ್ಪಾನರ್ ಹಾಗೂ ಜಾಕ್ ಹ್ಯಾಂಡಲ್ ಇವು ಸಾಮಾನ್ಯವಾಗಿ ಪ್ರತಿಯೊಂದು ಕಾರಿನಲ್ಲೂ ಕಂಡುಬರುತ್ತದೆ ಇದರ ಜೊತೆಗೆ ಟಾಯರ್ ಪಂಕ್ಚರ್ ಆದಂತ ಸಂದರ್ಭದಲ್ಲಿ ಅದಕ್ಕೆ ಬೇಕಾಗುವ ಟಾಯರ್ ರಿಪೇರ್ ಕಿಟ್‌ ಇರಿಸಿಕೊಳ್ಳುವುದು ಸೂಕ್ತ. ಅಷ್ಟೇ ಅಲ್ಲ ಕೆಲವೊಂದು ಬಾರಿ ನಿಮ್ಮ ಕಾರು ಕೆಟ್ಟು ಹೋಗಬಹುದು ಅಂತಹ ಸಂದರ್ಭದಲ್ಲಿ ಟೋವ್ ಮಾಡಲು ಗಟ್ಟಿ ಮುಟ್ಟಾದ ರೋಪ್ ಇರಿಸಿಕೊಳ್ಳುವುದು ಒಳ್ಳೆಯದು ಹಾಗೆಯೇ ನಿಮ್ಮ ಕಾರಿನ ಬ್ಯಾಟರಿ ಕೆಟ್ಟು ಹೋಗುವ ಸಾಧ್ಯತೆ ಇರುತ್ತದೆ ಹೆಚ್ಚಾಗಿ ಮಳೆಗಾಲದ ಅವಧಿಯಲ್ಲಿ ನಾವು ಇಂತಹ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ ಅಂತಹ ಸಮಯದಲ್ಲಿ ಕಾರನ್ನು ಸ್ಟಾರ್ಟ್ ಮಾಡಲು ಸಾಧ್ಯವಾಗುವುದಿಲ್ಲ ಆದ ಕಾರಣ ಯಾವತ್ತೀಗೂ ನಿಮ್ಮ ಕಾರಿನಲ್ಲಿ ಬ್ಯಾಟರಿ ಜಂಪ್ ಕೇಬಲ್ ಅನ್ನು ಇಟ್ಟುಕೊಳ್ಳಿ ಇದರ ಮೂಲಕ ಬೇರೆ ಕಾರುಗಳ ಬ್ಯಾಟರಿಯಿಂದ ನಿಮ್ಮ ಕಾರನ್ನು ನೀವು ಪ್ರಾರಂಭಿಸಬಹುದು ಹಾಗೂ ನಿಮ್ಮ ಕಾರಿನಲ್ಲಿ ಚಿಕ್ಕದಾದ ಫೈಯರ್ ಎಕ್ಟಿಂಗ್ವಿಶರ್ ಅನ್ನು ಇರಿಸಿಕೊಳ್ಳುವುದು ಕೂಡಾ ಒಳ್ಳೆಯದೇ. ಕಾರಿನಲ್ಲಿ ಶಾರ್ಟ್‌ಸರ್ಕ್ಯೂಟ್ ಸಮಸ್ಯೆಗಳಾದಂತ ಸಂದರ್ಭದಲ್ಲಿ ಬೆಂಕಿ ಆರಿಸಲು ಇದು ಸಹಾಯಕ್ಕೆ ಬರುತ್ತದೆ.
 
ಈ ಮೇಲಿನ ಉಪಕರಣಗಳನ್ನು ನಿಮ್ಮ ಕಾರಿನಲ್ಲಿ ನೀವು ಬಳಸುವುದರಿಂದ ಆಕಸ್ಮಿಕವಾಗಿ ಇಲ್ಲವೇ ಇಕ್ಕಟ್ಟಿನ ಪರಿಸ್ಧಿತಿಯಲ್ಲಿ ನೀವು ಸಿಲುಕಿದಾಗ ನೀವು ಸಮಸ್ಯೆಯಿಂದ ಸುಲಭವಾಗಿ ಪಾರಾಗಬಹುದು ಅಲ್ಲದೇ ನೀವು ಇಷ್ಟಪಡುವ ನಿಮ್ಮ ಕಾರನ್ನು ಸುರಕ್ಷಿತವಾಗಿಡಲು ಈ ಉಪಕರಣಗಳು ತುಂಬಾ ಉಪಯೋಗಕಾರಿ ಎಂದರೆ ತಪ್ಪಾಗಲಾರದು.
 

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿಗೆ ನಾಚಿಕೆಯಾಗಬೇಕು: ಸಿಎಂ ಸಿದ್ದರಾಮಯ್ಯ