Publish Date: Sat, 10 Feb 2018 (18:05 IST)
Updated Date: Sat, 10 Feb 2018 (18:07 IST)
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಂತಹ ನೀಚ ಮುಖ್ಯಮಂತ್ರಿಯನ್ನು ಬೆಳೆಸಿರುವುದು ಜೀವನದಲ್ಲಿ ಮಾಡಿದ ಮಹಾ ಪಾಪದ ಕೆಲಸ ಎಂದು ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡ ಅವರು ಹೇಳಿದ್ದಾರೆ.
ಕೆಂಗೇರಿ ಉಪನಗರದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಸೋನಿಯಾ ಗಾಂಧಿ ಅವರ ಬಲ ಕುಗ್ಗಿದೆ. ಇದನ್ನೇ ನೆಪ ಮಾಡಿಕೊಂಡ ಸಿಎಂ ಕಾಂಗ್ರೆಸ್‌ನಲ್ಲಿ ಸರ್ವಾಧಿಕಾರಿಯಂತೆ ಮೆರೆಯುತ್ತಿದ್ದಾರೆ. ಅವರು ಕೀಳು ಮಟ್ಟದ ರಾಜಕಾರಣಿ ಎಂದಿದ್ದಾರೆ.
ರಾಜ್ಯದ ಜನರ ಮನ ಗೆಲ್ಲುವ ಸಂದರ್ಭದಲ್ಲಿ ದೇವೇಗೌಡ ಬೇಕಾಗಿದ್ದ. ಈಗ ಶ್ರವಣಬೆಳಗೊಳದ ಕಾರ್ಯಕ್ರಮದಲ್ಲಿ ಮಾತನಾಡುವುದಕ್ಕೆ ಅವಕಾಶ ಕೊಡಲಿಲ್ಲ. ಸಿದ್ದರಾಮಯ್ಯ ಕೈ ಎತ್ತಿತ್ತಿ ಭಾಷಣ ಮಾಡುವುದನ್ನ ನಾನೂ ನೋಡಿದ್ದೇನೆ, ಸಿದ್ದರಾಮಯ್ಯ ಅವರೊಬ್ಬರೇ ಸತ್ಯವಂತರಾ ಎಂದು ಪ್ರಶ್ನಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.