Select Your Language

Notifications

webdunia
webdunia
webdunia
webdunia

ನರೇಂದ್ರಮೋದಿಗೆ ಸಮಾನವಾದ ವ್ಯಕ್ತಿ ಸಿದ್ದರಾಮಯ್ಯ- ಸ್ವಾಮೀಜಿ

ನರೇಂದ್ರಮೋದಿಗೆ ಸಮಾನವಾದ ವ್ಯಕ್ತಿ ಸಿದ್ದರಾಮಯ್ಯ- ಸ್ವಾಮೀಜಿ
ದಾವಣಗೆರೆ , ಶುಕ್ರವಾರ, 9 ಫೆಬ್ರವರಿ 2018 (21:17 IST)
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಸರಿ ಸಮಾನವಾದ ವ್ಯಕ್ತಿಯಾಗಿದ್ದು, ಅವರನ್ನು  ಮತ್ತೆ ಗೆಲ್ಲಿಸಬೇಕು ಎಂದು ಕಾಗಿನೆಲೆಯ ನಿರಂಜನಾನಂದ ಸ್ವಾಮೀಜಿ ಹೇಳಿದ್ದಾರೆ.

ದಾವಣಗೆರೆಯ ಹರಿಹರ ತಾಲ್ಲೂಕಿನ ಬೆಳ್ಳೊಡೆಯಲ್ಲಿ ಕನಕ ಪೀಠದ ರಜತ ಮಹೋತ್ಸವದಲ್ಲಿ ಮಾತನಾಡಿದ  ಅವರು, ಕೋಳಿ ಎಲ್ಲ ಕೇರಿಗಳಲ್ಲಿ ಕಾಳು ತಿಂದು ಬಂದು, ಮಾಲೀಕನ ಮನೆಯಲ್ಲಿ ಮೊಟ್ಟೆಯಿಡುತ್ತದೆ. ಅದೇರೀತಿ ಸಿದ್ದರಾಮಯ್ಯ ಮನೆಯ ಮಾಲೀಕನಿದ್ದಂತೆ ಆದ್ದರಿಂದ ಅವರನ್ನು ಮತ್ತೆ ಮುಖ್ಯಮಂತ್ರಿ  ಮಾಡಬೇಕು ಎಂದಿದ್ದಾರೆ.

ಕೆಂಪು ಕೋಟೆಯ  ಮೇಲೆ ಕಂಬಳಿ ಬೀಸಬೇಕಾದರೆ ರಾಜ್ಯದಲ್ಲಿ ಮತ್ತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಕ್ಕೆ ಬರಬೇಕು. ಆದ್ದರಿಂದ ಸಿದ್ದರಾಮಯ್ಯ ಎಲ್ಲರೂ ಮತ ಹಾಕಿ ಗೆಲ್ಲಿಸಬೇಕು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

‘ಮಠ ಕಟ್ಕೊಂಡು ನಾನೇನು ಮಾಡ್ಲಿ?’