ಬೆಂಗಳೂರು: ದೇಶದಲ್ಲಿ ಸದ್ಯಕ್ಕೆ ಮೋದಿಗೆ ಸರಿಸಮರಾದ ನಾಯಕರೆಂದರೆ ಸಿಎಂ ಸಿದ್ದರಾಮಯ್ಯ. ಮುಂದೊಂದು ದಿನ ಅವರೇ ದೇಶದ ಪ್ರಧಾನಿ ಆಗಲಿ. ಕರಿಕೋಟು ಹಾಕಿಕೊಂಡು ಕೆಂಪುಕೋಟೆಯಲ್ಲಿ ಧ್ವಜ ಹಾರಿಸುವುದಾದರೆ ನಾವೆಲ್ಲಾ ಬೆಂಬಲಿಸೋಣ ಎಂದು ಕನಕಗುರು ಪೀಠಾಧ್ಯಕ್ಷ ನಿರಂಜನಾನಂದ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.
ಸಿಎಂ ಸಿದ್ದರಾಮಯ್ಯಗೆ ಪ್ರಧಾನಿ ಆಗುವ ಶಕ್ತಿಯಿದೆ. ಮುಂದೊಂದು ದಿನ ಅವರೇ ಏಕೆ ಪ್ರಧಾನಿ ಆಗಬಾರದು? ಅವರಿಗೆ ಆ ಸಾಮರ್ಥ್ಯವಿದೆ. ಅವರ ಒಳ್ಳೆ ಕೆಲಸದಿಂದ ಮುಂದೊಂದು ದಿನ ಅವರು ಆ ಹುದ್ದೆಗೇರಿದರೆ ನಾವೆಲ್ಲಾ ಬೆಂಬಲಿಸೋಣ ಎಂದು ಸ್ವಾಮೀಜಿ ತಮ್ಮ ಸಮುದಾಯದವರಿಗೆ ಕರೆಕೊಟ್ಟಿದ್ದಾರೆ.
ಒಂದೆಡೆ ಸ್ವಾಮೀಜಿ ಈ ರೀತಿ ಹೇಳಿಕೆ ನೀಡಿದರೆ ಇನ್ನೊಂದೆಡೆ ಸ್ವತಃ ಸಿಎಂ ಸಿದ್ದರಾಮಯ್ಯ ಕೂಡಾ ಪರೋಕ್ಷವಾಗಿ ತಮ್ಮ ಪ್ರಧಾನಿ ಪಟ್ಟದ ಗುರಿ ಹಂಚಿಕೊಂಡಿದ್ದಾರೆ. ‘ಮೋದಿಗೆ ಕರ್ನಾಟಕವನ್ನು ಗೆಲ್ಲುವುದು ಗುರಿಯಾದರೆ, ನಮಗೆ ದೇಶವೇ ಟಾರ್ಗೆಟ್’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಈ ಮೂಲಕ ಪರೋಕ್ಷವಾಗಿ ಸಿಎಂ ತಮ್ಮ ಪ್ರಧಾನಿ ಪಟ್ಟದ ಮೇಲಿರುವ ಆಸೆಯನ್ನು ಸೂಚಿಸಿದರು ಎಂದೇ ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ