Publish Date: Thu, 08 Feb 2018 (11:02 IST)
Updated Date: Thu, 08 Feb 2018 (11:06 IST)
ನವದೆಹಲಿ: ಪ್ರಧಾನಿ ಮೋದಿ ನಿನ್ನೆ ಲೋಕಸಭೆಯಲ್ಲಿ ಮಾಡಿದ ಭಾಷಣ ವಿಪಕ್ಷಗಳ ಕೋಲಾಹಲಕ್ಕೆ ಕಾರಣವಾಗಿತ್ತು. ರಾಜ್ಯಸಭೆಯಲ್ಲೂ ಮೋದಿ ನಿನ್ನೆ ವಿಶೇಷವಾಗಿ ಗಮನ ಸೆಳೆದರು.
ಪ್ರಧಾನಿ ಮೋದಿ ಮಾತನಾಡಲು ಎದ್ದು ನಿಂತಾಗ ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ ಗಹ ಗಹಿಸಿ ನಗುತ್ತಿದ್ದರು. ಮೋದಿಗೆ ಕುಹುಕ ಮಾಡುತ್ತಿದ್ದ ಅವರ ರೀತಿ ಸಭಾಪತಿ ವೆಂಕಯ್ಯ ನಾಯ್ಡು ಕೆಂಗಣ್ಣಿಗೆ ಗುರಿಯಾಯಿತು.
ಕುಳಿತುಕೊಳ್ಳಿ. ಈ ರೀತಿ ವರ್ತನೆ ಸರಿಯಲ್ಲ. ಏನಾದರೂ ಸಮಸ್ಯೆಯಿದ್ದರೆ ವೈದ್ಯರ ಬಳಿ ಹೋಗಿ ಎಂದು ವೆಂಕಯ್ಯ ನಾಯ್ಡು ಕೋಪದಿಂದಲೇ ಹೇಳಿದರು. ಆದರೆ ಮಾತನಾಡಲು ಎದ್ದು ನಿಂತಿದ್ದ ಪ್ರಧಾನಿ ಮೋದಿ ‘ಸಭಾಪತಿಗಳೇ ರೇಣುಕಾಜೀಯನ್ನು ತಡೆಯಬೇಡಿ. ರಾಮಾಯಣ ಧಾರವಾಹಿ ಮುಗಿದ ಮೇಲೆ ಇದೇ ಮೊದಲ ಬಾರಿಗೆ ಇಂತಹದ್ದೊಂದು ನಗು ನೋಡುವ ಸೌಭಾಗ್ಯ ಇಂದೇ ಸಿಗುತ್ತಿದೆ’ ಎಂದು ಹಾಸ್ಯ ಮಾಡಿದರು. ತಕ್ಷಣ ಅಲ್ಲಿದ್ದ ಬಿಜೆಪಿ ಸದಸ್ಯರೆಲ್ಲಾ ಮೇಜು ಕುಟ್ಟಿ ಜೋರಾಗಿ ನಕ್ಕರು. ನಂತರ ಪ್ರಧಾನಿ ಮೋದಿ ತಮ್ಮ ಮಾತು ಮುಂದುವರಿಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ