Publish Date: Thu, 08 Feb 2018 (10:13 IST)
Updated Date: Thu, 08 Feb 2018 (10:18 IST)
ಶಿವಮೊಗ್ಗ : ಪ್ರಧಾನಿ ಮೋದಿ ಅವರ ಭಾಷಣವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಅವರು ತೀವ್ರವಾಗಿ ಖಂಡಿಸಿದ್ದಾರೆ.
‘ಪ್ರಧಾನ ಮಂತ್ರಿ ವಿರೋಧ ಪಕ್ಷದವರು. ಅವರು ನಮ್ಮನ್ನು ಹೊಗಳಲಿ ಎಂದು ನಾವು ಬಯಸುವುದಿಲ್ಲ. ಆದರೆ ಶೇ.10 ಸರ್ಕಾರ ಎಂದು ಯಾವುದೇ ದಾಖಲೆಗಳು ಇಲ್ಲದ ಮಾತನಾಡಿದ್ದಾರೆ. ಇದು ಪ್ರಧಾನಿ ಆದವರಿಗೆ ಶೋಭೆಯಲ್ಲ. ನಮ್ಮ ಸರ್ಕಾರವನ್ನು ನಂಗನಾಚ್ ಸರ್ಕಾರ ಎನ್ನುವ ಮೂಲಕ ಕಳಪೆ ಪದ ಬಳಕೆ ಮಾಡಿದ್ದಾರೆ. ಇದನ್ನ ಖಂಡಿಸುತ್ತೇನೆ’ ಎಂದು ಶಿವಮೊಗ್ಗದಲ್ಲಿ ಅವರು ಹೇಳಿದ್ದಾರೆ.
ನಾನು ಯಾವುದೇ ಕಾರಣಕ್ಕೂ ಕ್ಷೇತ್ರ ಬದಲಾವಣೆ ಮಾಡುವುದಿಲ್ಲ. ತೇರದಾಳ ಕ್ಷೇತ್ರದಿಂದಲೇ ಈ ಬಾರಿಯೂ ಸ್ಪರ್ಧೆ. ಕ್ಷೇತ್ರ ಬದಲಾವಣೆಗೆ ಕಾರಣಗಳಿಲ್ಲ. ನಾಟಕ ಅಕಾಡೆಮಿ ಲೋಗೋ ಬದಲಾವಣೆ ಮಾಡುವುದಿಲ್ಲ. ಪ್ರಶಸ್ತಿ ಫಲಕದಲ್ಲಿ ಮಾತ್ರ ಬದಲಾವಣೆ ಆಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಅವರು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ