Publish Date: Fri, 09 Feb 2018 (16:39 IST)
Updated Date: Fri, 09 Feb 2018 (16:43 IST)
ಬೆಂಗಳೂರು: ‘ಮಠಗಳನ್ನು ಕಟ್ಕೊಂಡು ನಾನೇನು ಮಾಡ್ಲಿ?’ ಮಠಗಳನ್ನು ಸುಪರ್ದಿಗೆ ತೆಗೆದುಕೊಳ್ಳುವ ರಾಜ್ಯ ಸರ್ಕಾರದ ನಿರ್ಧಾರದ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿದ್ದು ಹೀಗೆ.
ಈ ವಿಚಾರ ವಿವಾದವಾಗುತ್ತಿದ್ದಂತೆ ಸರ್ಕಾರ ಸುತ್ತೋಲೆ ಹಿಂಪಡೆದಿತ್ತು. ಈ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ ಸಿಎಂ ಸಿದ್ದರಾಮಯ್ಯ ಇದು ನಮ್ಮ ಸರ್ಕಾರದ ನಿರ್ಧಾರವಲ್ಲ ಎಂದಿದ್ದಾರೆ.
‘ಈ ಪ್ರಸ್ತಾಪ ಎಚ್ ಡಿ ಕುಮಾರಸ್ವಾಮಿ ಸಿಎಂ ಆಗಿದ್ದಾಗ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲೇ ಬಂದಿತ್ತು. ಹೀಗಾಗಿ ಇದು ನಾವು ಮಾಡಿದ ವಿಚಾರವಲ್ಲ. ಈಗ ನಮ್ಮ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಮಠಗಳನ್ನು ಸುಪರ್ದಿಗೆ ತೆಗೆದುಕೊಂಡು ನಾನೇನು ಮಾಡ್ಲಿ?’ ಎಂದು ಸಿಎಂ ಪ್ರಶ್ನಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ