Publish Date: Tue, 21 Nov 2023 (14:44 IST)
Updated Date: Tue, 21 Nov 2023 (14:48 IST)
ಕ್ರಿಕೆಟ್ ಬೆಟ್ಟಿಂಗ್ ರೇಡ್ ವೇಳೆ ಒಂದು ಕೆಜಿ ಚಿನ್ನ ಪತ್ತೆಯಾಗಿದ್ದು,ಸಿಸಿಬಿ ಪೊಲೀಸರಿಂದ ಆರ್ ಆರ್ ನಗರದ ಫ್ಲಾಟ್ ಒಂದರ ಮೇಲೆ ದಾಳಿ ನಡೆಸಲಾಗಿದೆ.ದಾಳಿ ವೇಳೆ ಲ್ಯಾಪ್ ಟಾಪ್ ಹಾಗೂ ಮೊಬೈಲ್ ಪತ್ತೆಯಾಗಿದೆ.
ಆನ್ಲೈನ್ ನಲ್ಲಿ ಕೆಲ ವೆಬ್ ಸೈಟ್ ಮೂಲಕ ಬೆಟ್ಟಿಂಗ್ ದಂದೆ ನಡೆಸಲಾಗುತಿತ್ತು. ನಂತರ ಫ್ಲಾಟ್ ಪರಿಶೀಲನೆ ಸಿಸಿಬಿ ಪೊಲೀಸರು ಮಾಡಿದ್ದಾರೆ.ಪರಿಶೀಲನೆ ವೇಳೆ ಫ್ಲಾಟ್ ನಲ್ಲಿ ಒಂದು ಕೆಜಿ ಚಿನ್ನ,ನೂರು ಗ್ರಾಂ ನ ಹತ್ತು ಚಿನ್ನದ ಬಿಸ್ಕೆಟ್ ಗಳು ಪತ್ತೆಯಾಗಿದೆ.
ಚಿನ್ನಕ್ಕೂ ಯಾವುದೇ ದಾಖಲೆಗಳು ಸಿಕ್ಕಿಲ್ಲ.ಹೀಗಾಗಿ ಚಿನ್ನವನ್ನ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಪ್ರಕರಣ ಸಂಬಂದ ವರ್ಡ್ ಕಪ್ ಫೈನಲ್ ಮ್ಯಾಚ್ ನಲ್ಲಿ ಬೆಟ್ಟಿಂಗ್ ದಂಧೆ ನಡೆಸುತಿದ್ದ ಇಬ್ಬರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.