ಗೋಕಾಕ್ ನವರ ಕೈಯಲ್ಲಿ ಸಿಕ್ಕರೆ ಮತ್ತೊಂದು ಸ್ವಾತಂತ್ರ್ಯ ಚಳುವಳಿ ಶುರು

ಶುಕ್ರವಾರ, 29 ನವೆಂಬರ್ 2019 (16:26 IST)
ಈ ಅನರ್ಹ ಶಾಸಕನದ್ದು ಪುಣ್ಯ ಕೋಟಿ ಆಕಳ ಮುಖ ಇದೆ ಅಂತಾ ಆರಿಸಿದ್ದೇವೆ. ಆದರೆ ಮಹೇಶ್ ಕುಮಠಳ್ಳಿ ಹೋರಿ ಮುಖ ಅಂತ ನಮಗೆ ಗೊತ್ತಿರಲಿಲ್ಲ. ಹೀಗಂತ ಮಾಜಿ ಗೃಹ ಮಂತ್ರಿ ಕಿಡಿಕಾರಿದ್ದಾರೆ.

ಅಥಣಿಯ ತೆಲಸಂಗ ಗ್ರಾಮದಲ್ಲಿ ಮಾಜಿ ಸಚಿವ ಎಂ.ಬಿ ಪಾಟೀಲ್ ಹೇಳಿಕೆ ನೀಡಿದ್ದು, ಪಟ್ಟಿ ಹಾಕಿ, ಉರುಳು ಸೇವೆ ಮಾಡಿ ಮಹೇಶ್ ಕುಮಠಳ್ಳಿಯನ್ನು ಆಯ್ಕೆ ಮಾಡಿದ್ದೀರಿ. ಆದರೆ ಮೂರೇ ದಿನಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್ ಮುಂದೆ ಕುಮಟ್ಟಳ್ಳಿ ಮೋಸ ಆಯ್ತು ಅಂದರಂತೆ.

ಗೋಕಾಕ್ ನವರು ಬಟನ್ ಒತ್ತುವವರು. ಮಹೇಶ್ ಕುಮಠಳ್ಳಿ ಆದೇಶ ಕೇಳುತ್ತಾನೆ. ಗೋಕಾಕ್ ನವರೇ ಆರಿಸಿ ತಂದಿದ್ದಾರಂತೆ, ಅಲ್ಲಿ ಚುನಾವಣೆಗೆ ನಿಲ್ಲುವ ಬದಲು ಇಲ್ಲಿಗೆ ಯಾಕೆ ಬಂದಿದ್ದೀ ಮಾರಾಯಾ?? ಅಂತ ಛೇಡಿಸಿದ್ರು.

ನೋಟು ಕುಮಟ್ಟಳ್ಳಿದು ತಗೊಂಡು, ವೋಟು ಮಂಗಸೂಳಿಗೆ ಹಾಕಿ ಅಂತಂದ ಎಂ ಬಿ ಪಾಟೀಲ್, ಗೋಕಾಕ್ ನವರ ಕೈಯಲ್ಲಿ ಅಥಣಿ ಸಿಕ್ಕರೆ ಮತ್ತೊಂದು ಸಲ ಸ್ವಾತಂತ್ರ್ಯ ಚಳುವಳಿ ಆಗಬೇಕಾಗುತ್ತೆ ಎಂದು ಎಚ್ಚರಿಸಿದ್ರು.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಅನರ್ಹ ಶಾಸಕರಿಗೆ ಪ್ರವೇಶ ಇಲ್ಲಾ – ಹುಟ್ಟಿದ ಊರಿನಲ್ಲೇ ಬಿಜೆಪಿ ಅಭ್ಯರ್ಥಿಗೆ ಮುಖಭಂಗ