Select Your Language

Notifications

webdunia
webdunia
webdunia
webdunia

ಬಿಬಿಎಂಪಿಯ ಹೊಸ ಸ್ಮಾರ್ಟ್ ಪಾರ್ಕಿಂಗ್ ಪ್ಲಾನ್ ಗೆ ಆಕ್ಷೇಪ..!

ಬಿಬಿಎಂಪಿಯ ಹೊಸ ಸ್ಮಾರ್ಟ್ ಪಾರ್ಕಿಂಗ್ ಪ್ಲಾನ್ ಗೆ ಆಕ್ಷೇಪ..!
bangalore , ಸೋಮವಾರ, 16 ಅಕ್ಟೋಬರ್ 2023 (14:41 IST)
ವಾರ್ಷಿಕ 500 ಕೋಟಿ ಆದಾಯ ನಿರೀಕ್ಷೆಯಲ್ಲಿ ಪಾಲಿಕೆ ಮಹಾ ಪ್ಲಾನ್  ನಡೆಸಿದೆ.ಈಗಾಗಲೇ ನಗರದಲ್ಲಿ ಕೋಟಿಗೂ ಅಧಿಕ ವಾಹನಗಳಿರುವುದರಿಂದ ವಾಹನ ನಿಲುಗಡೆಗೆ ಹೊಸ ಮಾರ್ಗ ಪಾಲಿಕೆ ಕಂಡುಹಿಡಿದ್ದಿದೆ.ಪಾರ್ಕಿಂಗ್ ಪಾಲಿಸಿ ಎಂಬ ನೂತನ ನೀತಿ ಜಾರಿಯಲ್ಲಿ ಹಗಲು ದರೋಡೆ ಪಾಲಿಕೆ ಮಾಡಿದೆ.ಇತ್ತೀಚೆಗಷ್ಟೇ ಅನುಷ್ಟಾನಕ್ಕೆ ಬಂದಿದ್ದ ಸ್ಮಾರ್ಟ್ ಪಾರ್ಕಿಂಗ್ ನ್ನ ನಗರದಲ್ಲಿ ಎಲ್ಲಿ ಎಲ್ಲೆಂದರಲ್ಲಿ ವಾಹನಗಳ ನಿಲುಗಡೆಗೆ ಕಡಿವಾಣ ಹಾಕಲು ಪಾರ್ಕಿಂಗ್ ಜಾರಿಗೆ ತಂದಿತ್ತು.ಇದರಿಂದ ವಾರ್ಷಿಕ ಅಂದಾಜು 400 ರಿಂದ 500 ಕೋಟಿ ಆದಾಯ ದೊರಕಿರುವ ನಿರೀಕ್ಷೆ ಇದೆ.ನಗರದಲ್ಲಿ 35 ಲಕ್ಷ ಸ್ವತ್ತುಗಳ ಪೈಕಿ ಶೇ.80 ಕಟ್ಟಡಗಳಲ್ಲಿ ಪಾರ್ಕಿಂಗ್ ನಿಯಮ‌ ಪಾಲಿಸಿಲ್ಲ.ಪಾದಚಾರಿ ಮಾರ್ಗದಲ್ಲಿ ವಾಹನಗಳು ಆಶ್ರಯ ಪಡೆದು ನರಕ ಸದೃಶ ವಾತಾವರಣ ಸೃಷ್ಟಿಯಾಗಿದೆ.ಹೀಗಾಗಿ ಹೊಸ ಪಾರ್ಕಿಂಗ್ ವ್ಯವಸ್ಥೆಯ ಕಲ್ಪಿಸಲಾಗಿತ್ತು.ಪ್ರದೇಶವಾರು ಪ್ರತ್ಯೇಕ ವಾಹನ ನಿಲುಗಡೆ ಯೋಜನೆ ತಂದಿದ್ದುಅಸ್ತವ್ಯಸ್ತ ಪಾರ್ಕಿಂಗ್ ಬದಲಿಗೆ ವಾಹನಗಳ ಆಚ್ಚುಕಟ್ಟು ನಿಲುಗಡೆ,ಎಲ್ಲೆಂದರಲ್ಲಿ ವಾಹನ ನಿಲ್ಲಿಸುವ ಪ್ರವೃತ್ತಿಗೆ ಕಡಿವಾಣ ಹಾಕಲಾಗಿದೆ.
 
ಹಣ ಪಾವತಿಸಿ ವಾಹನ ನಿಲ್ಲಿಸುವ ವ್ಯವಸ್ಥೆಗೆ ಉತ್ತೇಜನ ನೀಡಲಾಗಿದೆ.ಸಮೂಹ ಸಾರಿಗೆ ಪಾರ್ಕಿಂಗ್ ವ್ಯವಸ್ಥೆಗೆ ಉತ್ತೇಜನ ನೀಡಲಾಗಿದೆ.ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳದೇನೆ ಪಾರ್ಕಿಂಗ್ ವಸುಲಿಗೆ ಗುತ್ತಿಗೆದಾರರು ಈಗ ಇಳಿದಿದ್ದು,ಒಂದೇ ಪಾರ್ಕಿಂಗ್ ಸ್ಥಳದಲ್ಲಿ ಎರಡು ಬೋರ್ಡ್ ಗಳು ಹಾಕಿ ಪಾರ್ಕಿಂಗ್ ವಸೂಲಿ  ಮಾಡಲಾಗ್ತಿದೆ.SLM ಮತ್ತು LRM ಕಂಪನಿ ಗುತ್ತಿಗೆ ದಾರರು ಬಿಬಿಎಂಪಿ ಹಗಲು ದರೋಡೆಗಿಳಿದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿದ್ಯುತ್ ವ್ಯತ್ಯಯದ ವಿರುದ್ದ ಕಿಡಿಕಾರಿದ ಬಿಎಸ್ ವೈ