Select Your Language

Notifications

webdunia
webdunia
webdunia
webdunia

ಹಣ ಕ್ಲಿಯರ್ ಮಾಡುವುದಾಗಿ ಸಿಎಂ ಹೇಳಿದ್ದಾರೆ- ಕೆಂಪಣ್ಣ

ಹಣ ಕ್ಲಿಯರ್ ಮಾಡುವುದಾಗಿ ಸಿಎಂ ಹೇಳಿದ್ದಾರೆ- ಕೆಂಪಣ್ಣ
bangalore , ಶನಿವಾರ, 14 ಅಕ್ಟೋಬರ್ 2023 (19:34 IST)
ಸಿಎಂ ಭೇಟಿ ಬಳಿಕ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಪ್ರತಿಕ್ರಿಯಿಸಿದ್ದು,ಪೇಮೆಂಟ್ ಐದೂವರೆ ತಿಂಗಳಿಂದ ಆಗಿರಲ್ಲ.ಅದರ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿದ್ವಿ.ಅದಷ್ಟು ಬೇಗ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದಾರೆ.ಇನ್ನು ಏನಾದ್ರೂ ಸಮಸ್ಯೆ ಇದ್ರೆ ಬನ್ನಿ ಎಂದು ಹೇಳಿದ್ದಾರೆ.ನ್ಯಾಯಯುತವಾದ ಸಮಸ್ಯೆ ಬಗೆಹರಿಸುತ್ತೇವೆ ಎಂದು ಹೇಳಿದ್ದೇವೆ.ಅಧಿಕಾರಿಗಳು ಹಣ ಕೇಳುತ್ತಿದ್ದೇವೆ ಎಂದು ಹೇಳಿದ್ದೇವೆ.ಇಂಜಿನಿಯರ್ ಮತ್ತು ಬಿಬಿಎಂಪಿ ಕಮಿಷನರ್ ದುಡ್ಡು ಕೇಳುತ್ತಿದ್ದಾರೆ ಎಂದು ಹೇಳಿದ್ದೇವೆ‌.ಅಧಿಕಾರಿಗಳು ಕಮಿಷನ್ ಕೇಳಿದ್ರು ನಾವು ಕೊಟ್ಟಿಲ್ಲ ಎಂದು ಹೇಳಿದ್ವಿ ಅದಕ್ಕೆ ಸಿಎಂ ಅವರನ್ನ ಕರೆದು ಮಾತನಾಡುತ್ತೇನೆ ಎಂದು ಹೇಳಿದ್ದಾರೆ.
 
ಈ ವರ್ಷದೊಳಗೆ ಕ್ಲಿಯರ್ ಮಾಡುತ್ತೇವೆ ಎಂದು ಹೇಳಿದ್ದಾರೆ.50% ಅದ್ರು ತಿಂಗಳು ಆದ್ರು ಬಿಡುಗಡೆ ಮಾಡಿ ಎಂದು ಹೇಳಿದ್ದೇವೆ.ಒಂದು ತಿಂಗಳಲ್ಲಿ ಹಣ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದಾರೆ..42 ಕೋಟಿ ಸಿಕ್ಕಿರುವುದಕ್ಕೂ ನಮಗು ಯಾವುದೇ ಸಂಬಂಧ ಇಲ್ಲ.ಕುಮಾರಸ್ವಾಮಿ ಹೇಳಿದ್ರು ಇನ್ನೊಬ್ಬರು ಹೇಳಿದ್ರು ನನಗೂ ಸಂಬಂಧ ಇಲ್ಲ.ಕುಮಾರಸ್ವಾಮಿ ರಾಜಕೀಯವಾಗಿ ಎಷ್ಟು ಬೇಕಾದ್ರು ಹೇಳುತ್ತಾರೆ.ಉಪಾಧ್ಯಕ್ಷರು ಹಲವಾರು ವ್ಯಾವಹಾರ ಮಾಡುತ್ತಿದ್ದರು.‌ಹೋರಾಟ ಹಿಂಪಡೆಯುವ ಪ್ರಶ್ನೆಯೇ ಇಲ್ಲ.ಹಣ ಬಿಡುಗಡೆ ಮಾಡದೆ ಇದ್ರೆ ಹೋರಾಟ ಮಾಡುತ್ತೇವೆ ಎಂದು ಕೆಂಪಣ್ಣ ಹೇಳಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನ ದೇವನಹಳ್ಳಿ ಎರ್ಪೊರ್ಟ್ ಗೆ ಆಗಮಿಸಿದ ಇಸ್ರೇಲ್ ನ ಕನ್ನಡಿಗರು