Publish Date: Tue, 02 Apr 2019 (21:01 IST)
Updated Date: Tue, 02 Apr 2019 (21:02 IST)
ಪ್ರಖ್ಯಾತ ಕಿಂಗ್ ಮೇಕರ್ ಅಲ್ಲ, ಕುಖ್ಯಾತ ಕೀ ಮೇಕರ್ ನ್ನು ಪೊಲೀಸರು ಬಂಧಿಸಿದ್ದಾರೆ.
ಕೀ ಮೇಕಿಂಗ್ ಯಂತ್ರ ಇಟ್ಟುಕೊಂಡು ನಕಲಿ ಕೀಗಳನ್ನು ಇಟ್ಟುಕೊಂಡು ಅವುಗಳಿಂದ ಬೀಗ ಹಾಕಿದ ಮನೆಗಳನ್ನು ಗುರುತಿಸಿ ಬೀಗ ತೆಗೆದು ಒಳ ನುಗ್ಗಿ ಚಿನ್ನಾಭರಣ ಕಳ್ಳತನ ಮಾಡುತ್ತಿದ್ದವ ಈಗ ಅಂದರ್ ಆಗಿದ್ದಾನೆ.
ಬೆಂಗಳೂರಿನ ಉತ್ತರಹಳ್ಳಿಯ ಭುವನೇಶ್ವರಿ ನಗರದ ಪ್ರಕಾಶ್ ಬಂಧಿತ. ಈತನಿಂದ 40 ಲಕ್ಷದ ಚಿನ್ನಾಭರಣ, ಬೆಳ್ಳಿ, ಸಾವಿರಕ್ಕೂ ಹೆಚ್ಚು ನಕಲಿ ಕೀಗಳನ್ನು ವಶಕ್ಕೆ ಪಡೆಯಲಾಗಿದೆ.
ಹತ್ತು ವರ್ಷಗಳಿಂದ ಕಳ್ಳತನ ಮಾಡುತ್ತಿದ್ದ ಆರೋಪಿ ಕಳೆದ ವರ್ಷ ಬಂಧನವಾಗಿದ್ದ. ಆದರೆ ಜಾಮೀನು ಪಡೆದು ಹೊರಬಂದು ಮತ್ತೆ ಕಳ್ಳತನಕ್ಕೆ ಮುಂದಾಗಿದ್ದನು.