Select Your Language

Notifications

webdunia
webdunia
webdunia
Thursday, 24 April 2025
webdunia

ಅಬ್ಬಾ ಇವರೆಂಥಾ ಖದೀಮರು?

ಕಳ್ಳರು
ಚಿಕ್ಕೋಡಿ , ಮಂಗಳವಾರ, 2 ಏಪ್ರಿಲ್ 2019 (19:58 IST)
ಖತರ್ನಾಕ್ ಕಳ್ಳರ ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಅಥಣಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಕಳ್ಳತನ ಮಾಡಿ ಮಾರಾಟ ಮಾಡಿದ್ದ ಇಪ್ಪತ್ತೊಂದು ಬೈಕ್ ಹಾಗೂ ಒಂದು ಟ್ರ್ಯಾಕ್ಟರ್ ವಶ ಪಡಿಸಿಕೊಂಡಿದ್ದಾರೆ. ಎಂಟು ಲಕ್ಷ ಐವತ್ತು ಸಾವಿರ ಮೌಲ್ಯದ ವಾಹನಗಳನ್ನು ವಶಕ್ಕೆ ಪಡೆಯಲಾಗಿದ್ದು, ಮೂವರ ಬಂಧನ ಮಾಡಲಾಗಿದೆ.

ಸಪ್ತಸಾಗರ ಗ್ರಾಮದ ನಿವಾಸಿಗಳಾದ ರಾಜಕುಮಾರ ತಾತು ಚುನಾರ, ರವಿಚಂದ್ರ ಅಣ್ಣಪ್ಪ ಚುನಾರ, ನದಿ ಇಂಗಳಗಾಂವ ಗ್ರಾಮದ ರಾಜು ಪರಗೌಡ ಮುದಿಗೌಡರ ಬಂಧಿತ ಆರೋಪಿಗಳಾಗಿದ್ದಾರೆ.

ತಲೆ ಮರೆಸಿಕೊಂಡ ಇನ್ನುಳಿದ ಆರೋಪಿಗಳಿಗಾಗಿ ಕಾರ್ಯಾಚರಣೆ ಮುಂದುವರಿದಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಬತ್ತಿದ ನದಿಗೆ ನೀರು; ಭೀಮಾ ತೀರ ಖುಷ್