Daily Horoscope

Select Your Language

Notifications

webdunia
webdunia
webdunia
webdunia

ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಅಲ್ಲ, ಕರ್ನಾಟಕದ ಮಂತ್ರಿ ಯಾರಾಗಬೇಕು ಎಂದು ಈ ಇಬ್ಬರು ನಿರ್ಧರಿಸುತ್ತಾರೆ

DK Shivakumar-Randeep Surjewala
ಬೆಂಗಳೂರು: ಡಿಕೆ ಶಿವಕುಮಾರ್ ಸಿದ್ದರಾಮಯ್ಯ ಜೋಡಿ ದೆಹಲಿಯಲ್ಲಿದ್ದು ಯಾರಿಗೆ ಮಂತ್ರಿ ಪದವಿ ನೀಡಬೇಕು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ ಯಾರೆಲ್ಲಾ ಮಂತ್ರಿಯಾಗಬೇಕು ಎಂದು ತೀರ್ಮಾನಿಸುವುದು ಈ ಇಬ್ಬರಲ್ಲ.

ಡಿಕೆ ಶಿವಕುಮಾರ್ ನಾಳೆ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದಕ್ಕೆ ಮೊದಲು ಯಾರೆಲ್ಲಾ ಸಚಿವರಾಗಬೇಕು ಎಂಬ ಬಗ್ಗೆ ಅಂತಿಮ ಪಟ್ಟಿ ಸಿದ್ಧವಾಗುತ್ತಿದೆ. ಇದಕ್ಕಾಗಿ ಎರಡು ದಿನದಿಂದ ಡಿಕೆಶಿ, ಸಿದ್ದು ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ.

ಇಂದು ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಸಭೆ ನಡೆಸಲಿದ್ದಾರೆ. ಸಿದ್ದರಾಮಯ್ಯ-ಡಿಕೆಶಿ ನೀಡಿರುವ ಪಟ್ಟಿ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವುದು ರಾಹುಲ್ ಮತ್ತು ಮಲ್ಲಿಕಾರ್ಜುನ ಖರ್ಗೆಯಾಗಿರುತ್ತಾರೆ. ಇಂದೇ ಸಚಿವರ ಪಟ್ಟಿ ಅಂತಿಮಗೊಳ್ಳುವ ನಿರೀಕ್ಷೆಯಿದೆ.

ಹೊಸ ಸಂಪುಟದಲ್ಲಿ ಹಳಬರ ಜೊತೆಗೆ ಹೊಸ ಶಾಸಕರಿಗೂ ಸಚಿವ ಸ್ಥಾನ ಸಿಗುವ ನಿರೀಕ್ಷೆಯಿದೆ. ಸಚಿವ ಸ್ಥಾನಕ್ಕಾಗಿ ಈಗ ದೆಹಲಿಯಲ್ಲಿ ಲಾಬಿ ಜೋರಾಗಿ ನಡೆಯುತ್ತಿದೆ. ಆದರೆ ಅಂತಿಮ ತೀರ್ಮಾನ ತೆಗೆದುಕೊಳ್ಳುವವರು ರಾಹುಲ್ ಗಾಂಧಿಯೇ ಆಗಿರುತ್ತಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಿಕ್ಷಿಸುವ ನೆಪದಲ್ಲಿ ಮಗುವನ್ನು ಚರಂಡಿಯಲ್ಲಿ ಮುಳುಗಿಸಿದ ಇವನೆಂಥಾ ತಂದೆ: ವೈರಲ್ Video