Select Your Language

Notifications

webdunia
webdunia
webdunia
webdunia

ಸಿಎಂ ಆಗುವುದಕ್ಕಿಂತಲೂ ಡಿಕೆ ಶಿವಕುಮಾರ್ ಗೆ ಎದುರಾಗಿದೆ ದೊಡ್ಡ ತಲೆನೋವು

DK Shivakumar
ಬೆಂಗಳೂರು: ಸಿಎಂ ಆಗುವುದೇನೋ ಸುಲಭವಾಗಿ ನಡೆದು ಹೋಯಿತು. ಆದರೆ ಮುಂದಿನ ಹಂತವೇ ಡಿಕೆ ಶಿವಕುಮಾರ್ ಗೆ ದೊಡ್ಡ ತಲೆನೋವಾಗಿದೆ. ಈ ಬಗ್ಗೆ ಇಲ್ಲಿದೆ ವಿವರ.

ಹೈಕಮಾಂಡ್ ಸೂಚನೆ ಮೇರೆಗೆ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿದರು. ಇದಾದ ಬಳಿಕ ಕಾಂಗ್ರೆಸ್ ಹೈಕಮಾಂಡ್ ಸೂಚನೆ ಮೇರೆಗೆ ಶಾಸಕಾಂಗ ಸಭೆ ನಡೆಸಿ ಡಿಕೆ ಶಿವಕುಮಾರ್ ಮುಂದಿನ ಸಿಎಂ ಎಂದು ಘೋಷಣೆಯೂ ಆಗಿದೆ.

ಆದರೆ ಇದಾದ ಬಳಿಕ ಡಿಕೆಶಿ ಹಾದಿ ದುರ್ಗಮವಾಗಿದೆ. ಯಾಕೆಂದರೆ ಹೊಸ ಕ್ಯಾಬಿನೆಟ್ ಎಂದ ತಕ್ಷಣ ಸಚಿವಾಕಾಂಕ್ಷಿಗಳ ಪಟ್ಟಿಯೂ ಹನುಮಂತನ ಬಾಲದಂತೆ ದೊಡ್ಡದಾಗಿದೆ. ಹಳಬರು, ಹೊಸಬರು ನಮಗೆ ಮಂತ್ರಿಗಿರಿ ಕೊಡಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ.

ಯಾರಿಗೇ ನೀಡದೇ ಇದ್ದರೂ ಅಸಮಾಧಾನ ಸರ್ಕಾರಕ್ಕೇ ಕಂಟಕ ತಂದಿಡಬಹುದು. ಹೀಗಾಗಿ ನಿಭಾಯಿಸುವುದು ಡಿಕೆಶಿ ಪಾಲಿಗೆ ದೊಡ್ಡ ಸವಾಲಾಗಿದೆ. ಇದೇ ಕಾರಣಕ್ಕೆ ಯಾರಿಗೆಲ್ಲಾ ಸಚಿವ ಸ್ಥಾನ ಕೊಡಬೇಕು ಎಂದು ಹೈಕಮಾಂಡ್ ನಾಯಕರೇ ತೀರ್ಮಾನಿಸಲಿದ್ದಾರೆ. ಈ ಕಾರಣಕ್ಕೆ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಇಂದು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಅಲ್ಲಿಯೇ ಎಲ್ಲವೂ ತೀರ್ಮಾನವಾಗಲಿದೆ.


Share this Story:

Follow Webdunia kannada

ಮುಂದಿನ ಸುದ್ದಿ

Bengaluru: ನಾನು ವಿಐಪಿ ಅಲ್ಲ, ತೆರಿಗೆದಾರ ನನ್ನ ಪತ್ನಿ ಗರ್ಭಿಣಿ, ವಿಐಪಿಗಳಿಗಾಗಿ ರಸ್ತೆ ಯಾಕೆ ಬಂದ್ ಮಾಡಿದ್ದೀರಿ: ವ್ಯಕ್ತಿಯ ಆಕ್ರೋಶ Video