Publish Date: Sat, 30 May 2026 (17:31 IST)
Updated Date: Sat, 30 May 2026 (17:33 IST)
ಬೆಂಗಳೂರು: ಶಾಸಕಾಂಗ ಪಕ್ಷದ ನಾಯಕರಾಗಿ ಡಿಕೆ ಶಿವಕುಮಾರ್ ಆಯ್ಕೆಯಾಗಿದ್ದು, ಮುಂದಿನ ಮುಖ್ಯಮಂತ್ರಿಯಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಅವರ ಅಂದು ಹೇಳಿದ ಹೇಳಿಕೆ ನಿಜವಾಗಿದೆ.
ಈ ಹಿಂದೆ ಸಿಎಂ ಬದಲಾವಣೆ ವಿಚಾರ ಚರ್ಚೆಯಲ್ಲಿದ್ದಾಗ ಡಿಕೆ ಶಿವಕುಮಾರ್ ನನ್ನ ಜೊತೆಗೆ ಎಲ್ಲಾ ಕಾಂಗ್ರೆಸ್ ಶಾಸಕರೂ ಇದ್ದಾರೆ. ನನ್ನದು ಪ್ರತ್ಯೇಕ ಬಣವಿಲ್ಲ. ಸಿದ್ದರಾಮಯ್ಯ ಸೇರಿದಂತೆ ಎಲ್ಲಾ ಕಾಂಗ್ರೆಸ್ ಶಾಸಕರೂ ನನ್ನ ಬಣವೇ ಎಂದಿದ್ದರು.
ಅವರು ಅಂದು ಹೇಳಿದ ಹೇಳಿಕೆ ಇಂದು ನಿಜವಾಗಿದೆ. ತಾಳ್ಮೆಯಿಂದ ಕಾದ ಪರಿಣಾಮ ಇಂದು ಎಲ್ಲಾ ಶಾಸಕರ ಬೆಂಬಲದೊಂದಿಗೆ ನೂತನ ಸಿಎಂ ಆಗಿ ಆಯ್ಕೆಯಾಗಿದ್ದಾರೆ. ಸ್ವತಃ ಸಿದ್ದರಾಮಯ್ಯನವರೇ ಅವರ ಹೆಸರನ್ನು ಪ್ರಸ್ತಾಪಿಸಿದರು.
ಇದರೊಂದಿಗೆ ಪಕ್ಷದ ಶಿಸ್ತಿನ ಸಿಪಾಯಿಯಾಗಿ, ಪಕ್ಷದ ವಿರುದ್ಧ ಹೋಗದೇ ತನ್ನ ಗುರಿ ಸಾಧಿಸಿಕೊಂಡಿದ್ದಾರೆ. ಇದರೊಂದಿಗೆ ಸಿದ್ದರಾಮಯ್ಯ ಯುಗ ಅಧಿಕೃತವಾಗಿ ಅಂತ್ಯವಾಗಿದ್ದು ಇನ್ನೀಗ ಕನಕಪುರ ಬಂಡೆ ಡಿಕೆಶಿ ಆಡಳಿತ ಆರಂಭವಾಗಲಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ