Select Your Language

Notifications

webdunia
webdunia
webdunia
webdunia

ಕರ್ನಾಟಕ ಸಿಎಂ ಬದಲಾವಣೆಗೆ ಹೊರಟ ಕಾಂಗ್ರೆಸ್ ಹೈಕಮಾಂಡ್ ಗೆ ಎದುರಾಗಿದೆ ದೊಡ್ಡ ಶಾಕ್

Mallikarjun Kharge-DK Shivakumar-Siddaramaiah
ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಗೆ ಹೊರಟ ಕಾಂಗ್ರೆಸ್ ಹೈಕಮಾಂಡ್ ಗೆ ಈಗ ದೊಡ್ಡ ತಲೆನೋವೊಂದು ಎದುರಾಗಿದೆ. ಸಿಎಂ ಬದಲಾವಣೆಯೇನೋ ಸುಲಭವಾಗಿ ನಡೆದಿದೆ. ಆದರೆ ಡಿಸಿಎಂ ವಿಚಾರವೇ ಕಗ್ಗಂಟಾಗಿದೆ.

ಸಿದ್ದರಾಮಯ್ಯರಿಂದ ರಾಜೀನಾಮೆ ಕೊಡಿಸುವುದು ಹೈಕಮಾಂಡ್ ಗೆ ಸುಲಭವಾಗಿ ನಡೆದು ಹೋಯಿತು. ಇದಾದ ಬಳಿಕ ಡಿಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ. ಆದರೆ ಇದರ ಬೆನ್ನಲ್ಲೇ ಪಕ್ಷದ ಹಿರಿಯ ನಾಯಕರಿಂದ ಒಂದೊಂದೇ ಬೇಡಿಕೆ ಶುರುವಾಗಿದೆ.

ವಿಶೇಷವಾಗಿ ಸಿದ್ದರಾಮಯ್ಯ ಬಣವನ್ನೂ ಸಮಾಧಾನಪಡಿಸಲು ಮತ್ತು ಮುಂಬರುವ ಚುನಾವಣೆ ದೃಷ್ಟಿಯಿಂದ ಪಕ್ಷದ ಒಗ್ಗಟ್ಟು ಕಾಯ್ದುಕೊಳ್ಳಲು ಬರೋಬ್ಬರಿ ನಾಲ್ವರು ಡಿಸಿಎಂ ಹುದ್ದೆ ಸೃಷ್ಟಿಸಲು ಮುಂದಾಗಿದೆ. ಆದರೆ ನಾಲ್ವರು ಡಿಸಿಎಂಗಳು ಯಾರು ಎಂದು ಆಯ್ಕೆ ಮಾಡುವುದೇ ದೊಡ್ಡ ತಲೆನೋವಾಗಿದೆ.

ಡಿಸಿಎಂ ಹುದ್ದೆಗೆ ಈಗ ಹಿರಿಯ ಮತ್ತು ಪ್ರಭಾವಿ ನಾಯಕರು ಬೇಡಿಕೆಯಿಡುತ್ತಿದ್ದಾರೆ. ಡಿಸಿಎಂ ಹುದ್ದೆ ರೇಸ್ ನಲ್ಲಿ ಪರಿಶಿಷ್ಟ ಜಾತಿ, ದಲಿತ, ಅಲ್ಪಸಂಖ್ಯಾತ ಸಮುದಾಯ, ಲಿಂಗಾಯತ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಬೇಕು ಎಂಬ ಕೂಗು ಕೇಳಿಬಂದಿದೆ.

ಡಿಸಿಎಂ ಹುದ್ದೆ ರೇಸ್ ನಲ್ಲಿ ಡಾ ಜಿ ಪರಮೇಶ್ವರ್, ಎಂಬಿ ಪಾಟೀಲ್, ಸತೀಶ್ ಜಾರಕಿಹೊಳಿ, ಜಮೀರ್ ಅಹ್ಮದ್, ಯುಟಿ ಖಾದರ್, ಪ್ರಿಯಾಂಕ್ ಖರ್ಗೆ, ಡಾ ಯತೀಂದ್ರ ಸಿದ್ದರಾಮಯ್ಯ, ಬಿಕೆ ಹರಿಪ್ರಸಾದ್ ಹೆಸರುಗಳು ಕೇಳಿಬರುತ್ತಿವೆ. ಒಂದು ಕೋಟಾದಡಿ ಕನಿಷ್ಠ ಇಬ್ಬರ ನಡುವೆ ಪೈಪೋಟಿಯಿದೆ. ಒಬ್ಬರನ್ನು ಆಯ್ಕೆ ಮಾಡಿದರೆ ಇನ್ನೊಬ್ಬರ ಅಸಮಾಧಾನ ಕಟ್ಟಿಕೊಳ್ಳಬೇಕಾಗುತ್ತದೆ. ಹೀಗಾಗಿ ಯಾರನ್ನು ಆಯ್ಕೆ ಮಾಡುವುದು ಬಿಡುವುದು ಎಂಬ ದೊಡ್ಡ ತಲೆನೋವು ಹೈಕಮಾಂಡ್ ಮುಂದಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಡಿಕೆ ಶಿವಕುಮಾರ್ ಪ್ರಮಾಣ ವಚನ ದಿನ ಫಿಕ್ಸ್: ಈ ದಿನಕ್ಕಿದೆ ವಿಶೇಷ