Publish Date: Wed, 27 May 2026 (16:57 IST)
Updated Date: Wed, 27 May 2026 (16:59 IST)
ಬೆಂಗಳೂರು: ಹೈಕಮಾಂಡ್ ನಿರ್ಧಾರದಂತೆ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಲು ಮುಂದಾಗಿರುವ ಸಿದ್ದರಾಮಯ್ಯಗೆ ಈಗ ಆ ಒಂದು ಕಂಟಕ ಎದುರಾಗಿದೆ.
ರಾಹುಲ್ ಗಾಂಧಿಯೇ ಸ್ವತಃ ರಾಜೀನಾಮೆಗೆ ಸೂಚಿಸಿದ ಬಳಿಕ ಸಿದ್ದರಾಮಯ್ಯನವರು ರಾಜೀನಾಮೆ ಕೊಡಲು ಮುಂದಾಗಿದ್ದಾರೆ. ಇದನ್ನು ಇನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ. ಆದರೆ ರಾಜೀನಾಮೆ ಕೊಡುವ ಮುನ್ನ ಅವರಿಗೆ ಕಂಟಕವೊಂದು ಎದುರಾಗಿದೆ.
ತಮ್ಮ ರಾಜೀನಾಮೆ ನಿರ್ಧಾರದ ಬಗ್ಗೆ ಸಿಎಂ ಆಪ್ತ ಶಾಸಕರು, ಸಚಿವರ ಜೊತೆ ಚರ್ಚೆ ಮಾಡಿದ್ದಾರೆ. ಈ ವೇಳೆ ಆಪ್ತರು ರಾಜೀನಾಮೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ನಿಮ್ಮ ಪರವಾಗಿ ನಾವೇ ಹೈಕಮಾಂಡ್ ಬಳಿ ಮಾತನಾಡುವುದಾಗಿ ಹೇಳಿದ್ದಾರೆ. ಇನ್ನು ಪತ್ರದ ಮೂಲಕ ಸಹಿ ಸಂಗ್ರಹಿಸಿ ಹೈಕಮಾಂಡ್ ಗೆ ಸಲ್ಲಿಸುವ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ.
ಆದರೆ ರಾಹುಲ್ ಹೇಳಿದ ಮೇಲೆ ಅವರನ್ನು ಮಾತನ್ನು ತೆಗೆದುಹಾಕಲ್ಲ ಎಂದು ಸಿದ್ದರಾಮಯ್ಯ ಆಪ್ತರ ಬಳಿ ಹೇಳಿದ್ದಾರೆ. ಆದರೆ ಅವರಿಗೆ ಆಪ್ತರ ಮಾತನ್ನು ಸಂಪೂರ್ಣವಾಗಿ ಕಡೆಗಣಿಸುವಂತೆಯೂ ಇಲ್ಲ. ಹೀಗಾಗಿ ಅವರೀಗ ಸಂದಿಗ್ಧತೆ ಸಿಲುಕಿದ್ದು ಮೌನಕ್ಕೆ ಶರಣಾಗಿದ್ದಾರೆ ಎನ್ನಲಾಗಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ