Select Your Language

Notifications

webdunia
webdunia
webdunia
webdunia

ಹದಗೆಟ್ಟ ಆರ್ಥಿಕ ಸ್ಥಿತಿಗತಿಯನ್ನು ಸರಿಮಾಡಲು ಡಿಕೆ ಶಿವಕುಮಾರ್‌ಗೆ ಒಳ್ಳೆಯ ಅವಕಾಶ: ಅರವಿಂದ್‌ ಬೆಲ್ಲದ್‌

Karnataka New CM
Photo Courtesy X
ಧಾರವಾಡ: ಸಿದ್ದರಾಮಯ್ಯನವರ ಅವಧಿಯಲ್ಲಿ ಹದಗೆಟ್ಟು ಹೋಗಿರುವ ಆರ್ಥಿಕ ಸ್ಥಿತಿಗತಿಯನ್ನು ಸರಿಮಾಡಲು ಡಿಕೆ ಶಿವಕುಮಾರ್‌ಗೆ ಒಳ್ಳೆಯ ಅವಕಾಶ ಸಿಕ್ಕಿದೆ. ಅವರ ಅವಧಿಯಲ್ಲಾದ್ರೂ ರಾಜ್ಯ ಅಭಿವೃದ್ಧಿಯಾಗಲಿ ಎಂದು 

ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ್ ಬೆಲ್ಲದ್ ಹೇಳಿದರು.

ಧಾರವಾಡದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು,  136 ಸೀಟು ಗೆಲ್ಲಿಸಿ ಅಧಿಕಾರಕ್ಕೆ ತಂದ ಜನತೆಗೆ ರಾಜ್ಯದಲ್ಲಿ ಮೂರು ವರ್ಷದಲ್ಲಿ ನ್ಯಾಯ ಸಿಕ್ಕಿಲ್ಲ. ಈ ರಾಜ್ಯ ಅಭಿವೃದ್ಧಿ ಆಗಲಿದೆ, ಸುಭಿಕ್ಷೆ ಹೊಂದಲಿದೆ ಎಂದು ಜನ ಕಾಯುತ್ತಿದ್ದರು. ಆದರೆ ಯಾವುದೇ ಅಭಿವೃದ್ಧಿ ಆಗಿಲ್ಲ. ಅಲ್ಪಸಂಖ್ಯಾತರನ್ನು
ಓಲೈಸುವುದು ಬಿಟ್ಟು ಬೇರೆ ಕೆಲಸ ಆಗಿಲ್ಲ. ಹಿಂದೆಂದೂ ಕಾಣದಷ್ಟು ಭ್ರಷ್ಟಾಚಾರ ಈ ರಾಜ್ಯದಲ್ಲಿ ಆಗಿದೆ ಎಂದು ಹೇಳಿದರು.

ಡಿಕೆಶಿಗೆ ಒಂದು ಅವಕಾಶ ಸಿಕ್ಕಿದೆ. ಸರಿಯಾಗಿ ಅದನ್ನು ಉಪಯೋಗ ಮಾಡಿ, ಎಲ್ಲರನ್ನು ಸಮನಾಗಿ ಕಾಣುವ ಕೆಲಸ ಮಾಡಬೇಕು ಎಂದು ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಗ್ಯಾರಂಟಿ ಫಲಾನುಭವಿಗಳ ಹೆಸರು ಏಕಾಏಕಿ ತೆಗೆದು ಕಿರುಕುಳ ಕೊಡುವುದೇಕೆ: ಡಾ ಸಿಎನ್ ಅಶ್ವತ್ಥ್ ನಾರಾಯಣ ಪ್ರಶ್ನೆ