Daily Horoscope

Select Your Language

Notifications

webdunia
webdunia
webdunia
webdunia

ಸರ್ಕಾರದಲ್ಲಿ ಯಾರಿಗೆ ಕೊಡಬೇಕು ಸಚಿವ ಸ್ಥಾನ, ಕಾಂಗ್ರೆಸ್ ನಲ್ಲಿ ತೀರ್ಮಾನ ಮಾಡೋರು ಇವರೇ

Karnataka Congress
ಕಲಬುರಗಿ: ಡಿಕೆ ಶಿವಕುಮಾರ್ ನೇತೃತ್ವದ ಹೊಸ ಸಚಿವ ಸಂಪುಟದಲ್ಲಿ ಯಾರಿಗೆಲ್ಲಾ ಮಂತ್ರಿಗಿರಿ ಕೊಡಬೇಕು ಎಂಬ ಬಗ್ಗೆ ತೀರ್ಮಾನ ಮಾಡುವವರು ಯಾರು ಗೊತ್ತಾ?

ನಿನ್ನೆಯಷ್ಟೇ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನಾಗಿ ಡಿಕೆ ಶಿವಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ. ಡಿಕೆಶಿ ಏನೋ ಸಿಎಂ ಆಗುತ್ತಿದ್ದಾರೆ. ಆದರೆ ಅವರ ಜೊತೆಗೆ ಬುಧವಾರ ಯಾರೆಲ್ಲಾ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬ ಬಗ್ಗೆ ಎಲ್ಲರಲ್ಲಿ ಕುತೂಹಲವಿದೆ.

ಈ ನಡುವೆ ಸಚಿವಾಕಾಂಕ್ಷಿಗಳು ಈಗಾಗಲೇ ಹೈಕಮಾಂಡ್ ಕದ ತಟ್ಟುತ್ತಿದ್ದಾರೆ. ಕಾಂಗ್ರೆಸ್ ನಲ್ಲಿ ಯಾರಿಗೆಲ್ಲಾ ಮಂತ್ರಿಗಿರಿ ಕೊಡಬೇಕು ಎಂಬ ಬಗ್ಗೆ ಇಂದು ಫೈನಲ್ ಆಗುವ ಸಾಧ್ಯತೆಯಿದೆ. ಇದನ್ನು ಫೈನಲ್ ಮಾಡುವುದು ಮಲ್ಲಿಕಾರ್ಜುನ ಖರ್ಗೆ.

ಮಲ್ಲಿಕಾರ್ಜುನ ಖರ್ಗೆ ಕಲಬುರಗಿಗೆ ಬಂದಿಳಿದಿದ್ದು ಇಲ್ಲಿಯೇ ಯಾರೆಲ್ಲಾ ಸಚಿವರಾಗಬೇಕು ಎಂಬ ಅಂತಿಮ ಪಟ್ಟಿ ಖಚಿತವಾಗಲಿದೆ. ಅವರೆಲ್ಲಾ ಬುಧವಾರ ಡಿಕೆಶಿ ಜೊತೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಎಲ್ಲಾ ಸಮುದಾಯಕ್ಕೆ ಅಸಮಾಧಾನವಾಗದಂತೆ ಮತ್ತು ಮುಂಬರುವ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಅಳೆದು ತೂಗಿ ಸಚಿವರ ಪಟ್ಟಿ ತಯಾರಿಸಲಾಗುತ್ತದೆ. ಇದರ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆಯೂ ಅಂತಿಮವಾಗುವ ಸಾಧ್ಯತೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆನೆಗಿರುವಷ್ಟು ಕರುಣೆ ಮನುಷ್ಯರಿಗಿರಲ್ಲ... ನೀರಿಗೆ ಬಿದ್ದು ಗಾಬರಿಯಿಂದ ಅಳುತ್ತಿದ್ದ ಮಗುವಿಗೆ ಏನು ಮಾಡ್ತು ನೋಡಿ video