Publish Date: Mon, 01 Jun 2026 (09:28 IST)
Updated Date: Mon, 01 Jun 2026 (09:30 IST)
ಬೆಂಗಳೂರು: ಸಿದ್ದರಾಮಯ್ಯ ರಾಜೀನಾಮೆ ಬಳಿಕ ಕರ್ನಾಟಕದ ನೂತನ ಸಿಎಂ ಆಗಲಿರುವ ಡಿಕೆ ಶಿವಕುಮಾರ್ ಗೆ ಇದೊಂದು ಹೂ ಎಂದರೆ ಅಲರ್ಜಿಯಂತೆ. ಅದು ಯಾಕೆ ಗೊತ್ತಾ?
ಡಿಕೆ ಶಿವಕುಮಾರ್ ಸಿಎಂ ಆಗಿ ಬುಧವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಆಗಲೇ ಅವರಿಗೆ ಹೋದಲ್ಲೆಲ್ಲಾ ಜನ ಹಾರ ಹಾಕಿ ಭರ್ಜರಿ ಸ್ವಾಗತ ಕೋರುತ್ತಿದ್ದಾರೆ. ಈ ನಡುವೆ ಡಿಕೆಶಿ ಈ ರೀತಿ ಹಾರ ತುರಾಯಿ ಹಾಕುವವರಿಗೆ ಒಂದು ಎಚ್ಚರಿಕೆ ಕೊಟ್ಟಿದ್ದಾರೆ.
ಹೊಸ ಸಿಎಂಗೆ ಅಭಿನಂದನೆ ಸಲ್ಲಿಸಲು ಬರುವವರು ಯಾರೂ ಹೂವಿನ ಹಾರ ತರೋ ಹಾಗೇ ಇಲ್ಲ. ತಮ್ಮ ಮನೆಯ ಹತ್ತಿರ ಹೂವಿನ ಹಾರವನ್ನೇ ನಿಷೇಧ ಮಾಡಿದ್ದಾರಂತೆ ಡಿಕೆ ಶಿವಕುಮಾರ್. ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ನನಗೆ ಹೂವಿನ ಹಾರ ಹಾಕೋದೇ ಬೇಡ. ನನಗೆ ಹೂವಿನ ಆಗಿ ಬರೋಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಅದರಲ್ಲೂ ಸುಗಂಧ ರಾಜ ಹೂ ಎಂದರೆ ಡಿಕೆಶಿಗೆ ಅಗೋದೇ ಇಲ್ವಂತೆ. ಇದು ನನಗೆ ಅಲರ್ಜಿ ಉಂಟು ಮಾಡುತ್ತದೆ. ಮೈ ಎಲ್ಲಾ ಕಡಿತವಾಗುತ್ತದೆ. ಹಾಗಾಗಿ ನನಗೆ ಹೂವಿನ ಹಾರ ಹಾಕಬೇಡಿ ಎಂದು ಡಿಕೆಶಿ ಮನವಿ ಮಾಡಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ