Select Your Language

Notifications

webdunia
webdunia
webdunia
webdunia

ನಮ್ಮವರು ಯಾರೂ ಕಾಂಗ್ರೆಸ್ ಗೆ ಹೋಗಲ್ಲ- ಸದಾನಂದಗೌಡ

ನಮ್ಮವರು ಯಾರೂ ಕಾಂಗ್ರೆಸ್ ಗೆ ಹೋಗಲ್ಲ- ಸದಾನಂದಗೌಡ
bangalore , ಶನಿವಾರ, 19 ಆಗಸ್ಟ್ 2023 (16:46 IST)
ಆಪರೇಷನ್ ಹಸ್ತ ವಿಚಾರವಾಗಿ ಕಾಂಗ್ರೆಸ್ ನಾಯಕರ ವಿರುದ್ಧ ಸಂಸದ ಡಿವಿಎಸ್ ವಾಗ್ದಾಳಿ ನಡೆಸಿದ್ದಾರೆ.ಸಿದ್ದರಾಮಯ್ಯ, ಡಿಕೆಶಿ ಸಮುದ್ರದ ಮೇಲೆ ಕಲ್ಲೆಸೆಯುವ ಕೆಲಸ ಮಾಡ್ತಿದಾರೆ.ತಮ್ಮಲ್ಲಿರುವ ಗೊಂದಲ‌ ಮುಚ್ಚಿಕೊಳ್ಳಲು ಹಾರಿಕೆ ಸುದ್ದಿ ಹರಡ್ತಿದಾರೆ.ಮೂರೇ ತಿಂಗಳಲ್ಲಿ ಕಾಂಗ್ರೆಸ್ ನವ್ರ ಕಪಟ ನಾಟಕ ಜನರಿಗೆ ಗೊತ್ತಾಗಿದೆ.ಅವರ ಭರವಸೆ ಈಡೇರಿಸಿಲ್ಲ, ಅವರ ಶಾಸಕರನ್ನು ಸಮಾಧಾನ ಮಾಡಲು ಆಗಿಲ್ಲ.ನಮ್ಮವರು ಯಾರೂ ಕಾಂಗ್ರೆಸ್ ಗೆ ಹೋಗಲ್ಲ?ನಮ್ಮವರೇನು ಇವರ ತಂಬೂರಿ ಹಿಂದೆ ಹೋಗಲು ಇಲಿಗಳಾ?ಬೈರತಿ ಬಸವರಾಜ್ ಕಾಂಗ್ರೆಸ್ ಗೆ ಹೋಗಲ್ಲ ಅಂದಿದಾರೆ.ಗೋಪಾಲಯ್ಯನವರೂ ಕಾಂಗ್ರೆಸ್ ಗೆ ಹೋಗಲ್ಲ, ಬೇಕಾದರೆ ನೇಣು ಹಾಕ್ಕೋತೇನೆ ಅಂದಿದಾರೆ.ಎಸ್ ಟಿ ಸೋಮಶೇಖರ್ ಕೂಡಾ ನಾನು ಕಾಂಗ್ರೆಸ್ ಸೇರ್ತೀನಿ ಅಂತ ಹೇಳಿಲ್ಲ ಅಂದಿದಾರೆ.ಸೋಮಶೇಖರ್ ಜತೆ ಮೊನ್ನೆ ಕರೆಸಿ‌ ಮಾತಾಡಿದ್ದೇನೆ.ಅವರ ಕ್ಷೇತ್ರದಲ್ಲಿ ಕೆಲ ಆಂತರಿಕ ಸಮಸ್ಯೆ ಇದೆ, ಅದನ್ನು ಬಗೆಹರಿಸುವ ಕೆಲಸ ಮಾಡ್ತೇವೆ.ಸೋಮಶೇಖರ್ ಕಾಂಗ್ರೆಸ್ ಗೆ ಹೋಗಲ್ಲ ಅನ್ನೋದು ನಮ್ಮ ನಂಬಿಕೆ ಎಂದು ಸದಾನಂದಗೌಡ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಖಾಸಗಿ ಸಾರಿಗೆ ಸಂಘಟನೆಗಳಿಂದ ಬೆಂಗಳೂರು ಬಂದ್ !