Select Your Language

Notifications

webdunia
webdunia
webdunia
webdunia

ಶಿವಮೊಗ್ಗದಲ್ಲಿ ನಿಲ್ಲದ ಪೋಸ್ಟರ್ ವಾರ್

Non-stop poster war in Shimoga
ಶಿವಮೊಗ್ಗ , ಶುಕ್ರವಾರ, 7 ಏಪ್ರಿಲ್ 2023 (19:15 IST)
ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ಫ್ಲೆಕ್ಸ್ ಹಾಗೂ ಪೋಸ್ಟರ್ ವಾರ್​​​ ನಿಲ್ಲುವಂತೆ ಕಾಣುತ್ತಿಲ್ಲ. ಶಿವಮೊಗ್ಗದಲ್ಲಿ ಕಳೆದ ಒಂದು ತಿಂಗಳಿಂದ ಪೋಸ್ಟರ್ ವಾರ್ ನಡೆಯುತ್ತಲೇ ಇದ್ದು, ಮಾಜಿ ಸಚಿವ ಈಶ್ವರಪ್ಪ ವಿರುದ್ದ ಬಿಜೆಪಿ ಹಿರಿಯ ಮುಖಂಡ ಆಯನೂರು. ಪರೋಕ್ಷವಾಗಿ ಪೋಸ್ಟರ್ ವಾರ್ ನಡೆಸಿದ್ರು. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಈಶ್ವರಪ್ಪ ವಿರುದ್ಧ ಮಾಡಿದ ಟೀಕೆಗೆ ಮತ್ತೊಂದು ಪೋಸ್ಟರ್ ವಾರ್ ಶುರುವಾಗಿದ್ದು, ಆಯನೂರು ಮಂಜುನಾಥ್ ಅವರಿಗೆ ಅನೇಕ ಪ್ರಶ್ನೆಗಳ ಮೂಲಕ ಟೀಕಿಸಿದ್ದಾರೆ. "ಶಾಂತವಾಗಿದ್ದ ಶಿವಮೊಗ್ಗದಲ್ಲಿ ಅಮಾಯಕ ಹರ್ಷನನ್ನು ಅಮಾಯಕವಾಗಿ ಕೊಂದಿದ್ದು ಯಾರು....?""ಗೋಹತ್ಯೆ ನಿಷೇಧ ಕಾಯಿದೆ ಜಾರಿ ಬಂದ ನಂತರವೂ ಮಾಜಿ ಕಾರ್ಪೋರೇಟರ್ ಮನೆಯಲ್ಲಿ ಗೋಮಾಂಸ ದೊರೆತಿದ್ದರ ಮರ್ಮವೇನು...?", ISI ನಂಟಿರುವ ಆತಂಕವಾದಿ ಶಿವಮೊಗ್ಗದಲ್ಲೇ ಏಕೆ ಸಿಕ್ಕಿಬಿದ್ದ..? ಎಂದು ಆಯನೂರು ಮಂಜುನಾಥ್ ಫೋಟೋ ಹಾಕಿ ಪೋಸ್ಟರ್ ವಾರ್ ನಡೆಸಿದ್ದಾರೆ. ಈ ಕುರಿತ ಪೋಸ್ಟರ್ ಈಗ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿದ್ದು, ಬಿಜೆಪಿ ನಾಯಕರಿಗೆ ದೊಡ್ಡ ತಲೆನೋವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಕ್ರಮ ಹಣ ಮತ್ತು ಮದ್ಯ ವಶಕ್ಕೆ