Select Your Language

Notifications

webdunia
webdunia
webdunia
webdunia

ಭರವಸೆ ಈಡೇರಿಸಿದ ಇತಿಹಾಸವೇ ಕಾಂಗ್ರೆಸ್​ಗೆ ಇಲ್ಲ : ಕೇಂದ್ರ ಹಣಕಾಸು ಸಚಿವೆ

ಭರವಸೆ ಈಡೇರಿಸಿದ ಇತಿಹಾಸವೇ ಕಾಂಗ್ರೆಸ್​ಗೆ ಇಲ್ಲ : ಕೇಂದ್ರ ಹಣಕಾಸು ಸಚಿವೆ
bangalore , ಶುಕ್ರವಾರ, 7 ಏಪ್ರಿಲ್ 2023 (16:07 IST)
ಭರವಸೆ ಈಡೇರಿಸಿದ ಇತಿಹಾಸವೇ ಕಾಂಗ್ರೆಸ್​ಗೆ ಇಲ್ಲ. ಇಂತಹ ಕಾಂಗ್ರೆಸ್ ಈಗ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ಉಚಿತ ಭರವಸೆ ನೀಡುತ್ತಿದೆ. ಅವರ ಈಡೇರಿಕೆ ಅಸಾಧ್ಯವಾಗಿದ್ದು, ಕಾಂಗ್ರೆಸ್​ನ ಭರವಸೆ ನಂಬಬೇಡಿ ಎಂದು ರಾಜ್ಯದ ಜನತೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮನವಿ ಮಾಡಿದ್ದಾರೆ.ಮಲ್ಲೇಶ್ವರದಲ್ಲಿರುವ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ನಾಲ್ಕು ಉಚಿತ ಭರವಸೆ ನೀಡಿದೆ. ಈಗಾಗಲೇ ಹಲವು ರಾಜ್ಯಗಳಲ್ಲಿ ಉಚಿತ ಕೊಡುಗೆ ನೀಡೋದಾಗಿ ಹೇಳಿ ಕೈಕೊಟ್ಟಿದೆ. ಮಧ್ಯಪ್ರದೇಶದಲ್ಲಿ ಸಾಕಷ್ಟು ಭರವಸೆ ನೀಡಿತ್ತು.. ಸಾಲಮನ್ನಾ ಘೋಷಣೆ ಮಾಡಿತ್ತು. ಈಗ ಮತ್ತೆ ಚುನಾವಣೆ ಬರುತ್ತಿದೆ.. ಆದರೆ ಮಧ್ಯಪ್ರವೇಶ ಭರವಸೆ ಭರವಸೆಗಳಾಗಿಯೇ ಉಳಿದಿವೆಎಂದು ದೂರಿದ್ರು.ಇತರ ರಾಜ್ಯದಲ್ಲಿ ಭರವಸೆ ಈಡೇರಿಸದೇ ಕರ್ನಾಟಕ ಚುನಾವಣೆಯಲ್ಲಿ ಕಾಂಗ್ರೆಸ್ ಮಹಿಳೆಯರಿಗೆ 2 ಸಾವಿರ, 200 ಯೂನಿಟ್ ಉಚಿತ ವಿದ್ಯುತ್, ಯುವಕರಿಗೆ 2000 ಕೊಡೋದಾಗಿ ಹೇಳಿದ್ದಾರೆ. ಕರ್ನಾಟಕ ರಾಜ್ಯದ ಬಜೆಟ್ 3 ಲಕ್ಷ ಕೋಟಿ ಇದೆ. ಇವರು ಕೊಟ್ಟಿರೋ ಭರವಸೆ ಈಡೇರಿಕೆಗೆ ಒಂದು ಲಕ್ಷ ಕೋಟಿ ಬೇಕು. ಉಳಿದ ಎರಡು ಲಕ್ಷ ಕೋಟಿಯಲ್ಲಿ ಸರ್ಕಾರ ನಡೆಸಬೇಕು. ಜನರನ್ನ ಉಳಿದ ಹಣದಲ್ಲಿ ಹೇಗೆ ನಡೆಸಿಕೊಳ್ಳಲಿದೆ ಎಂದು ಊಹಿಸಿಕೊಳ್ಳಿ. ಆದರೆ ನಿಮ್ಮ ರಾಜ್ಯ ಬಜೆಟ್ 3ನೇ 1ರಷ್ಟು ಇದಕ್ಕೆ ಮೀಸಲಿಡಬೇಕು. ಇದು ಸಂಪೂರ್ಣ ಜನರನ್ನ ಮೋಸ ಮಾಡುವ ತಂತ್ರವಾಗಿದೆ. ಕರ್ನಾಟಕದ ಜನರು ಇದಕ್ಕೆ ಮರುಳಾಗಬೇಡಿ ಎಂದ್ರು

Share this Story:

Follow Webdunia kannada

ಮುಂದಿನ ಸುದ್ದಿ

ಏ. 12ರಿಂದ 20ರವರೆಗೆ ಕರ್ನಾಟಕದಲ್ಲಿ ವರುಣಾರ್ಭಟ