Publish Date: Tue, 01 Nov 2022 (10:38 IST)
Updated Date: Tue, 01 Nov 2022 (08:42 IST)
ಬೆಂಗಳೂರು : ಪ್ರಚಾರಕ್ಕಾಗಿ ನಮ್ಮ ಮೇಲೆ ಕೆಲವರು ಆರೋಪ ಮಾಡ್ತಿದ್ದಾರೆ. ನಾನು ಅಧ್ಯಕ್ಷೆಯಾಗಿ ಇರಬೇಕಾ..? ಬೇಡವಾ..? ಅಂತ ಪಕ್ಷದ ನಾಯಕರು,
ಹೈಕಮಾಂಡ್ ತೀರ್ಮಾನ ಮಾಡುತ್ತೆ ಅಂತ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಹೇಳಿದ್ದಾರೆ.
ಮಹಿಳಾ ಘಟಕದ ಗಲಾಟೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಪಕ್ಷಕೋಸ್ಕರ, ಚುನಾವಣೆಗಾಗಿಯೇ ಕೆಲವು ಬದಲಾವಣೆ ಮಾಡಲಾಗಿದೆ. ಎಲ್ಲಾ ನಾಯಕರ ಅನುಮತಿ ಪಡೆದು ನಿರ್ಧಾರ ಮಾಡಲಾಗಿದೆ. ರಾಮಲಿಂಗಾರೆಡ್ಡಿ ಅವರು ನಮ್ಮ ಇನ್ ಚಾರ್ಜ್. ಅವರ ಅನುಮತಿ ಪಡೆದು ನಿರ್ಧಾರ ಮಾಡಿದ್ದೇವೆ ಎಂದರು.