Publish Date: Tue, 18 Oct 2022 (06:40 IST)
Updated Date: Mon, 17 Oct 2022 (23:42 IST)
ಕೋಲ್ಕತ್ತಾ : ಕ್ರಿಕೆಟ್ನಲ್ಲೂ ರಾಜಕೀಯ ಮಾಡಬೇಡಿ, ಐಸಿಸಿ ಅಧ್ಯಕ್ಷ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸುತ್ತಿರುವ ಸೌರವ್ ಗಂಗೂಲಿಗೆ ಅವಕಾಶ ನೀಡಿ,
ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಯವರು ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಮೋದಿ ಅವರೇ ರಾಜಕೀಯವಾಗಿ ನಿರ್ಧಾರ ತೆಗೆದುಕೊಳ್ಳಬೇಡಿ, ಗಂಗೂಲಿ ಅವರು ರಾಜಕೀಯ ಪಕ್ಷದ ಸದಸ್ಯರಲ್ಲ.
ಅವರು ಬಿಸಿಸಿಐ ಸ್ಥಾನಕ್ಕೆ ಸೂಕ್ತ ವ್ಯಕ್ತಿ. ಬಿಸಿಸಿಐ ಅಧ್ಯಕ್ಷರಾಗಿ ಸ್ಥಾನ ಪಡೆದಿರುವ ಸೌರವ್ ಗಂಗೂಲಿ ಅವರು 2ನೇ ಬಾರಿಗೆ ಈ ಸ್ಥಾನದಿಂದ ವಂಚಿತರಾಗಿದ್ದಾರೆ.