Publish Date: Sun, 30 Oct 2022 (14:13 IST)
Updated Date: Sun, 30 Oct 2022 (14:16 IST)
ಹೆಡ್ ಬುಷ್ ಚಿತ್ರದ ಪ್ರಚಾರ ಮಾಡ್ತಿದ್ದವರ ವಿರುದ್ಧ ವಿಧಾನಸೌದ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.ಕಾರು ಹಾಗೂ ಬೈಕ್ ಗಳಲ್ಲಿ ಬಂದು ಬೆಳಗ್ಗೆ 11 ಗಂಟೆಯಲ್ಲಿ ರಸ್ತೆ ಮದ್ಯೆ ಕಿರುಚಾಡುತ್ತ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುತ್ತಿದ್ದ ಆರೋದಪ ಮೇಲೆ ಎಫ್ ಐ ಆರ್ ದಾಖಲಿಸಲಾಗಿದೆ.ಹೆಡ್ ಬುಷ್ ಸಿನಿಮಾ ಪೋಸ್ಟರ್ ಗಳನ್ನ ಹಿಡಿದು ಜೋರಾಗಿ ಕಿರುಚಾಡುತ್ತಾ ನ್ಯೂಸೆನ್ಸ್ ಕ್ರಿಯೇಟ್ ಮಾಡಿದ್ದ ಆರೋಪದ ಮೇಲೆ ದೂರು ದಾಖಲಾಗಿದ್ದು,ಐದಕ್ಕಿಂತ ಹೆಚ್ಚು ಜನ ಅಕ್ರಮಕೂಟ ಕಟ್ಟಿಕೊಂಡು ಹೆಡ್ ಬುಷ್ ಚಿತ್ರದ ಬಗ್ಗೆ ಕೂಗಾಡುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖವಾಗಿದೆ.ವಿಧಾನಸೌಧ ಮೆಟ್ರೋ ಸ್ಟೇಷನ್ ಮುಂದೆ ಓಡಾಡುವ ವಾಹನಗಳ ಸಂಚಾರಕ್ಕೆ ಅಡ್ಡಿ ಪಡಿಸುತ್ತಿದ್ದರೆಂದು ದೂರಿ ನೀಡಿದ್ದಾರೆ.ಹೀಗಾಗಿ ಐದು ಮಂದಿ ಅಪರಿಚಿತರ ವಿರುದ್ಧ ಸುಮೋಟೋ ಕೇಸ್ ದಾಖಲಿಸಲಾಗಿದೆ.