Select Your Language

Notifications

webdunia
webdunia
webdunia
webdunia

ಸಿಲಿಕಾನ್ ಸಿಟಿಯಲ್ಲಿ ಸರಗಳ್ಳರ ಖತರ್ನಾಕ್ ಪ್ಲಾನ್

Sargalla's Catastrophic Plan in Silicon City
bangalore , ಭಾನುವಾರ, 30 ಅಕ್ಟೋಬರ್ 2022 (14:07 IST)
ನಗರದಲ್ಲಿ ಜನರಿಗೆ ಡೌಟ್  ಬರದ ರೀತಿ ಖತರ್ನಾಕ್ ಕಳ್ಳರು ಪ್ಲಾನ್ ಮಾಡಿ ಸರಗಳ್ಳತನ ಮಾಡ್ತಿದ್ದಾರೆ.ಸರಗಳ್ಳರ ಖತರ್ನಾಕ್ ಪ್ಲಾನ್ ಸಿಸಿಟಿವಿಯಲ್ಲಿ ಸೆರೆಯಾಗಿದ್ದು,ಬೈಕ್ ನಲ್ಲಿ  ಮೊದಲೇ ಏರಿಯಾಗೆ ಬಂದಿದ್ದ ಸರಗಳ್ಳ ಅಡ್ರೆಸ್ ಹುಡುಕುವ ನೆಪದಲ್ಲಿ ರಸ್ತೆಯಲ್ಲಿ ಓಡಾಟ ನಡೆಸಿದ್ದಾನೆ.ಇದೇ ವೇಳೆ ತನ್ನದೇ ಸಹಚರನನ್ನ  ಮುಂಚೆಯೇ ಅಸಾಮಿ ಅಲ್ಲಿಗೆ ಕಳಿಸಿದ.ಅಡ್ರೆಸ್ ಕೇಳುವ ನೆಪದಲ್ಲಿ ಬೈಕ್ ಸವಾರ ಮತ್ತು ಇಬ್ಬರು ಮಾತುಕತೆ ನಡೆಸಿದ್ದಾರೆ.ದಾರಿ ತೋರಿಸುವ ರೀತಿಯಲ್ಲಿ ವರ್ತಿಸುತ್ತಾ ಬೈಕ್ ಬಳಿ ಅಸಾಮಿ ನಿಂತಿದ್ದ .ಇದೇ ವೇಳೆ ಹಾಲು ತರಲು ಮನೆಯಿಂದ ಮಹಿಳೆ ರಸ್ತೆಗೆ ಬರ್ತಿದ್ದಂತೆ ಕತ್ತಿಗೆ ಕೈ ಹಾಕಿ ಅಸಾಮಿ ಸರ ಕಸಿದಿದ್ದಾನೆ.ನೋಡ ನೋಡುತ್ತಿದ್ದಂತೆ ಸರ ಕಸಿದು ಪರಾರಿಯಾಗಿದ್ದಾನೆ.
 
ಇನ್ನೂ ಅಡ್ರೆಸ್ ಹೇಳುತ್ತಿದ್ದ ಮತ್ತೊಬ್ಬ ಕಳ್ಳ ಕೂಡ ಬೈಕ್ ಹತ್ತಿ ಎಸ್ಕೇಪ್ ಆಗಿದ್ದಾನೆ.ನಗರದ ಜಯನಗರದಲ್ಲಿ ಖತರ್ನಾಕ್ ಐಡಿಯಾದಿಂದ ಸರಗಳ್ಳರು ಮಹಿಳೆಯರ ಸರ ಕಳ್ಳತನ ಮಾಡ್ತಿದ್ದಾರೆ.ಖತರ್ನಾಕ್ ಫ್ಲಾನ್ ಮೂಲಕ ಮಹಿಳೆಯ 60 ಗ್ರಾಂ ಮಾಂಗಲ್ಯ ಸರ ಕಸಿದು ಎಸ್ಕೇಪ್ ಆಗಿದ್ದ.ಸುಮಾರು 2.50 ಲಕ್ಷ ಮೌಲ್ಯದ 60 ಗ್ರಾಂ ಮಾಂಗಲ್ಯ ಸರ ಕಸಿದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.ಈ ಬಗ್ಗೆ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ನಡೆಸಿ ಇಬ್ಬರು ಸರಗಳ್ಳರನ್ನ  ಪೊಲೀಸರು ಪತ್ತೆ ಹಚ್ಚಿದಾರೆ.ಮಹಮ್ಮದ್ ರಫೀಕ್ ಮತ್ತು ಮಹಮ್ಮದ್ ಅನೀಸ್ ಎಂಬುವರರನ್ನ ವಶಕ್ಕೆ ಪಡೆಯುವಲ್ಲಿ ಪೊಲೀಸರು ಕೊನೆಗೂ  ಯಶಸ್ವಿಯಾಗಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಮಗಳನ್ನೇ ಕೊಚ್ಚಿ ಕೊಂದ ತಂದೆ!?