Select Your Language

Notifications

webdunia
webdunia
webdunia
webdunia

ಮೋರ್ಬಿ ದುರಂತವನ್ನ ರಾಜಕೀಯಗೊಳಿಸೋದು ಅಗೌರವ ಎಂದ ರಾಹುಲ್

ಮೋರ್ಬಿ ದುರಂತವನ್ನ ರಾಜಕೀಯಗೊಳಿಸೋದು ಅಗೌರವ ಎಂದ ರಾಹುಲ್
ಹೈದರಾಬಾದ್ , ಮಂಗಳವಾರ, 1 ನವೆಂಬರ್ 2022 (08:20 IST)
ಹೈದರಾಬಾದ್ : ಬಿಜೆಪಿ ಆಡಳಿತ ರಾಜ್ಯದ ಪ್ರತಿಯೊಂದು ಹಗರಣಗಳ ಬಗ್ಗೆ ಕಿಡಿ ಕಾರುತ್ತಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುಜರಾತಿನ ಮೋರ್ಬಿ ತೂಗು ಸೇತುವೆ ದುರಂತದ ವಿಷಯದಲ್ಲಿ ಮೃದು ಸ್ವಭಾವ ತಾಳಿದ್ದಾರೆ.

ತೆಲಂಗಾಣದ ಭಾರತ್ ಜೋಡೋ ಯಾತ್ರೆಯಲ್ಲಿರುವ ರಾಹುಲ್ ಗಾಂಧಿ ಅವರು ಪ್ರತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸುತ್ತಾ, ನಾನು ಇದನ್ನು ರಾಜಕೀಯಗೊಳಿಸುವುದಿಲ್ಲ ಎಂದು ಹೇಳಿದ್ದಾರೆ.

ಮೋರ್ಬಿ ಸೇತುವೆ ಕುಸಿತಕ್ಕೆ ಯಾರು ಹೊಣೆ ಎಂದು ನೀವು ಭಾವಿಸುತ್ತೀರಿ? ಎಂಬ ಪ್ರಶ್ನೆಗೆ ನಾನು ಈ ಘಟನೆಯನ್ನು ರಾಜಕೀಯಗೊಳಿಸಲು ಬಯಸೋದಿಲ್ಲ. ಜನರು ಅಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಅದನ್ನು ರಾಜಕೀಯಗೊಳಿಸುವುದು ಅಗೌರವ. ನಾನು ಅದನ್ನು ಮಾಡಲು ಹೋಗುವುದಿಲ್ಲ ಎಂದಿದ್ದಾರೆ. 


Share this Story:

Follow Webdunia kannada

ಮುಂದಿನ ಸುದ್ದಿ

ವಾಹನ ಸವಾರರಿಗೆ ಸಿಹಿಸುದ್ದಿ : ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ