Publish Date: Sat, 03 Aug 2019 (16:07 IST)
Updated Date: Sat, 03 Aug 2019 (16:09 IST)
ಮೈತ್ರಿ ಸರಕಾರ ಪತನಗೊಂಡ ಬಳಿಕ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳಿಂದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ನೊಂದುಕೊಂಡಂತಿದ್ದು, ರಾಜಕೀಯ ಬಿಡೋ ಬಗ್ಗೆ ಮಾತನಾಡಿದ್ದಾರೆ.
ರಾಜ್ಯದ ರಾಜ್ಯಕಾರಣ ಹೇಗೋಗೋ ಸಾಗುತ್ತಿದೆ. ಅಧಿಕಾರವೇ ಈಗ ಮುಖ್ಯವಾಗಿದೆ. ಮೌಲ್ಯ ಕಳೆದುಕೊಳ್ಳುತ್ತಿರುವ ರಾಜಕೀಯದಲ್ಲಿ ಮುಂದುವರಿಯಬೇಕೆಂದು ನನಗೆ ಅನಿಸುತ್ತಿಲ್ಲ. ಹೀಗಂತ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ದೇವರು ನೀಡಿರೋ ಅವಕಾಶಗಳಿಂದಾಗಿ ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿ ಕೆಲಸ ಮಾಡಿರುವೆ. ಪ್ರಸ್ತುತ ದಿನಗಳಲ್ಲಿ ಉತ್ತಮ ರಾಜಕಾರಣ ನಶಿಸಿದೆ ಎಂದ್ರು.
ರಾಜ್ಯದ ಜನರು ಎಲ್ಲವನ್ನೂ ನೋಡಿದ್ದು, ಸೂಕ್ಷ್ಮವಾಗಿ ಹಾಗೂ ಸೂಕ್ತ ಕಾಲದಲ್ಲಿ ನಿರ್ಧಾರ ಮಾಡಿ ತೀರ್ಮಾನ ಕೊಡುತ್ತಾರೆ. ಮೈತ್ರಿ ಸರಕಾರದ್ದು ಪಾಪದ ಸರಕಾರ ಅಂತಿದ್ರು. ಈಗ ಪವಿತ್ರದ ಸರಕಾರವಂತೆ. ಏನೇನೂ ಮಾಡ್ತಾರೆ ನೋಡೋಣ ಅಂತ ಹೆಚ್.ಡಿ.ಕೆ. ಹೇಳಿದ್ರು.