ಬಿಜೆಪಿ ವಿರುದ್ಧ ಗುಡುಗಿದ ಹೆಚ್.ಡಿ.ಕುಮಾರಸ್ವಾಮಿ

ಸೋಮವಾರ, 29 ಜುಲೈ 2019 (16:47 IST)
ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ಮೊದಲ ದಿನದ ಸದನದಲ್ಲೇ ಕಮಲ ಪಾಳೆಯದ ವಿರುದ್ಧ ಮಾಜಿ ಸಿಎಂ ಗುಡುಗಿದ್ದಾರೆ.

ಬಿಜೆಪಿ ನೇತೃತ್ವದ ರಾಜ್ಯ ಸರಕಾರವನ್ನು ಸುಮ್ಮನೆ ಬಿಡೋದಿಲ್ಲ. ಹೀಗಂತ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಸದನದಲ್ಲಿ ಧನವಿನಿಯೋಗ ಮಸೂದೆಯ ಚರ್ಚೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರಕಾರ ಭ್ರಷ್ಟಾಚಾರ ಮಾಡಿದ್ರೆ ಸುಮ್ಮನಿರೋಲ್ಲ ಅಂತ ಕಿಡಿಕಾರಿದ್ರು.

ನದಿ ನೀರಿನ ವಿಷಯದಲ್ಲಿ ಬಿಜೆಪಿ ರಾಜಕೀಯ ಮಾಡಿದೆ ಅಂತ ದೂರಿದ ಕುಮಾರಸ್ವಾಮಿ, ಅಧಿಕಾರ ಯಾರಿಗೂ ಶಾಶ್ವತ ಅಲ್ಲ. ಈ ಮಾತನ್ನು ಬಿಜೆಪಿಯವರು ಮರೆಯಬಾರದು ಅಂತ ಹೇಳಿದ್ದಾರೆ.

ಅತೃಪ್ತ ಶಾಸಕರನ್ನು ಬಿಜೆಪಿ ತನ್ನ ಅಧಿಕಾರಕ್ಕಾಗಿ ಪಿಶಾಚಿಗಳನ್ನಾಗಿ ಮಾಡಿದೆ ಅಂತ ವ್ಯಂಗ್ಯವಾಡಿದ್ರು.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ನಂದಿಗಿರಿ ಪ್ರದಕ್ಷಿಣೆಯಿಂದ ಕೈಲಾಸ ದರ್ಶನದಷ್ಟೇ ಪುಣ್ಯ ಕಟ್ಟಿಕೊಳ್ಳಿ