Publish Date: Thu, 07 Sep 2017 (13:17 IST)
Updated Date: Thu, 07 Sep 2017 (13:20 IST)
ಬೆಂಗಳೂರು: ಬಿಜೆಪಿ ಯುವ ಮೋರ್ಚಾ ನಡೆಸುತ್ತಿರುವ ಮಂಗಳೂರು ಚಲೋ ಸಮಾವೇಶ ನಡೆಸಲು ನಮ್ಮ ತಕರಾರಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಿಜೆಪಿ ಸಮಾವೇಶ ನಡೆಸೋಕೆ ನಮ್ಮ ತಕರಾರಿಲ್ಲ. ಆದರೆ ಬೈಕ್ ರ‍್ಯಾಲಿಗೆ ನಮ್ಮ ಅನುಮತಿಯಿಲ್ಲ. ಅನುಮತಿ ಕೊಟ್ಟ ಕಡೆ ಸಭೆ ನಡೆಸಲಿ ಎಂದಿದ್ದಾರೆ.
ಬೈಕ್ ರ‍್ಯಾಲಿ ಮೂಲಕ ಬಿಜೆಪಿ ಸಾಮರಸ್ಯ ಹಾಳು ಮಾಡೋಕೆ ಹೊರಟಿದೆ. ಆದ್ದರಿಂದ ಬೈಕ್ ರ‍್ಯಾಲಿಗೆ ಅವಕಾಶವಿಲ್ಲ ಸಿಎಂ ಹೇಳಿದ್ದಾರೆ.