Publish Date: Thu, 07 Sep 2017 (11:25 IST)
Updated Date: Thu, 07 Sep 2017 (11:29 IST)
ಮಂಗಳೂರು: ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆ ವಿರೋಧಿಸಿ ಮಂಗಳೂರು ಚಲೋ ರ್ಯಾಲಿ ನಡೆಸುತ್ತಿರುವ ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಜ್ಯೋತಿ ಸರ್ಕಲ್ ನಲ್ಲಿ ನಡೆಯುತ್ತಿರುವ ಸಮಾವೇಶದಲ್ಲಿ ಮಾತನಾಡಿದ ಸಂಸದ ನಳೀನ್ ಕುಮಾರ್ ಕಟೀಲ್ ‘ನಮ್ಮನ್ನು ಕಂಡರೆ ಸಿಎಂ ಸಿದ್ದರಾಮಯ್ಯಗೆ ಭಯ’ ಎಂದಿದ್ದಾರೆ.
ದ.ಕನ್ನಡ ಜಿಲ್ಲೆಯಲ್ಲಿ 13 ಕ್ಕೂ ಹೆಚ್ಚು ಮಂದಿ ಹಿಂದೂ ಕಾರ್ಯಕರ್ತರ ಕೊಲೆಯಾಗಿದೆ. ರಾಜ್ಯ ಸರ್ಕಾರ ಇವರನ್ನು ಬಂಧಿಸುವ ಬದಲು ಅಪರಾಧಿಗಳ ರಕ್ಷಣೆ ಮಾಡುತ್ತಿದೆ. ಇದಕ್ಕೆಲ್ಲಾ ಕಾರಣ ಕರ್ತರಾದ ಅರಣ್ಯ ಸಚಿವ ರಮಾನಾಥ್ ರೈ ರಾಜೀನಾಮೆ ನೀಡಬೇಕು ಎಂದು ಸಂಸದ ಕಟೀಲ್ ಆಗ್ರಹಿಸಿದ್ದಾರೆ.