Publish Date: Thu, 07 Sep 2017 (10:53 IST)
Updated Date: Thu, 07 Sep 2017 (10:55 IST)
ಮುಖ್ಯಮಂತ್ರಿ ಸಿದ್ದರಾಮಯ್ಯ ವಿವಿಧ ಕಾರ್ಯಕ್ರಮಗಳಿಗೆ ಶಂಕುಸ್ಥಾಪನೆ ನೆರವೇರಿಸುತ್ತಿರುವ ಹಿನ್ನೆಲೆಯಲ್ಲಿ ವಿಐಪಿಗಳ ವಾಹನ ನಿಲುಗಡೆಗಾಗಿ ಕಾಲೇಜು ಕಂಪೌಂಡ್ ಧ್ವಂಸಗೊಳಿಸಿರುವುದು ಜನತೆಯ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಸಿಎಂ ಸಿದ್ದರಾಮಯ್ಯ ನಾಳೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿರುವುದರಿಂದ ಕಾಲೇಜು ಆವರಣದಲ್ಲಿ ಬೃಹತ್ ವೇದಿಕೆ ಹಾಕಲಾಗಿದೆ. ಸಿಎಂ ಸಿದ್ದರಾಮಯ್ಯ ಅವರೊಂದಿಗೆ ನೂರಾರು ಬೆಂಬಲಿಗರ ವಾಹನಗಳು ಆಗಮಿಸುತ್ತಿರುವುದರಿಂದ ಪಾರ್ಕಿಂಗ್‌ಗಾಗಿ ಕಾಲೇಜು ಕಂಪೌಂಡ್ ಧ್ವಂಸಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕೇವಲ ಒಂದು ಕಾರ್ಯಕ್ರಮಕ್ಕಾಗಿ ಕಾಲೇಜು ಕಂಪೌಂಡ್ ಧ್ವಂಸಗೊಳಿಸಿರುವುದು ಜನತೆಯಲ್ಲಿ ಆಕ್ರೋಶ ಮೂಡಿಸಿದೆ. ಅಧಿಕಾರಿಗಳು ಕಾಲೇಜು ಕಂಪೌಂಡ್ ಒಡೆಯಲು ಕಾಲೇಜಿನ ಅಡಳಿತ ಮಂಡಳಿಯ ಅನುಮತಿ ಪಡೆದಿದ್ದರೆ? ಎಂದು ಪ್ರಶ್ನಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮದ ನಂತರ ಕಾಲೇಜು ಕಂಪೌಂಡ್ ಗೋಡೆಯನ್ನು ಕಟ್ಟಿಸಿಕೊಡಬೇಕು. ಇಲ್ಲವಾದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಜನರು ಜಿಲ್ಲೆಯ ಅಧಿಕಾರಿಗಳನ್ನು ಎಚ್ಚರಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.