Select Your Language

Notifications

webdunia
webdunia
webdunia
webdunia

ಸಚಿವ ರಮಾನಾಥ್ ರೈಗೆ ಈ ಜನ್ಮದಲ್ಲಿ ಅನ್ನ ಸಿಗಲ್ಲ: ಆರ್.ಅಶೋಕ್

ಸಚಿವ ರಮಾನಾಥ್ ರೈಗೆ ಈ ಜನ್ಮದಲ್ಲಿ ಅನ್ನ ಸಿಗಲ್ಲ: ಆರ್.ಅಶೋಕ್
ಮಂಗಳೂರು , ಗುರುವಾರ, 7 ಸೆಪ್ಟಂಬರ್ 2017 (11:51 IST)
ಶಾಲಾ ಮಕ್ಕಳ ಅನ್ನವನ್ನು ಕಸಿದ ರಮಾನಾಥ್ ರೈಗೆ ಈ ಜನ್ಮದಲ್ಲಿ ಅನ್ನ ಸಿಗಲ್ಲ ಎಂದು ಮಾಜಿ ಡಿಸಿಎಂ ಆರ್.ಅಶೋಕ್ ಗುಡುಗಿದ್ದಾರೆ.
ನಗರದ ಜ್ಯೋತಿ ಸರ್ಕಲ್ ಬಳಿ ಬಿಜೆಪಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು,  ಕೆಎಫ್‌ಡಿಯಲ್ಲಿರುವವರು ಪಾಕಿಸ್ತಾನದ ದತ್ತುಪುತ್ರರು ಆದ್ದರಿಂದ ಕೆಎಫ್‌ಡಿ, ಪಿಎಫ್‌ಐ ಸಂಘಟನೆಗಳನ್ನು ನಿಷೇಧಿಸಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದ್ದಾರೆ. 
 
ನಿದ್ದೆಯಿಂದ ಏದ್ದೇಳಿ ನಿದ್ದೆರಾಮಯ್ಯನವರೇ ನಮ್ಮ ಹೋರಾಟ ನಿಮ್ಮ ಸರಕಾರದ ವಿರುದ್ಧ ಪೊಲೀಸರ ವಿರುದ್ಧವಲ್ಲ. ಪೊಲೀಸರಿಗೆ ಅನಗತ್ಯವಾಗಿ ತೊಂದರೆ ಕೊಡಬೇಡಿ ಎಂದು ಕಿವಿಮಾತು ಹೇಳಿದರು.  
 
ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಲ್ಲಿ ಕೆಎಫ್‌ಡಿ ಮತ್ತು ಪಿಎಫ್‌ಐ ಸಂಘಟನೆಗಳನ್ನು ನಿಷೇಧಿಸಲಾಗುವುದು. ಹಿಂದು ನಾಯಕರ ಹಂತಕರ ಹೆಡೆಮುರಿಕಟ್ಟಲಾಗುವುದು ಎಂದು ಗುಡುಗಿದ್ದಾರೆ.
 
ಸಿದ್ದರಾಮಯ್ಯ, ರಮಾನಾಥ್ ರೈ ಮತ್ತು ಕೆಂಪಯ್ಯ ವಿರುದ್ಧ ನಮ್ಮ ಹೋರಾಟ ನಿರಂತರವಾಗಿ ಸಾಗಲಿದೆ ಎಂದು ಬಿಜೆಪಿ ಮುಖಂಡ ಆರ್.ಅಶೋಕ್ ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಗೌರಿ ಲಂಕೇಶ್ ಹತ್ಯೆ ಬಳಿಕ ಲಂಕೇಶ್ ಪತ್ರಿಕೆ ಗತಿಯೇನು? ಇಂದ್ರಜಿತ್ ಲಂಕೇಶ್ ಹೇಳಿದ್ದಿಷ್ಟು!