Select Your Language

Notifications

webdunia
webdunia
webdunia
webdunia

ಯಾರೇ ಬರಲಿ ಗೆಲ್ಲೋದು ನಾನೇ-ಜನಾರ್ದನ ರೆಡ್ಡಿ

No matter who comes
bangalore , ಮಂಗಳವಾರ, 27 ಡಿಸೆಂಬರ್ 2022 (15:31 IST)
ಜನಾರ್ದನ ರೆಡ್ಡಿ ಎಂಟ್ರಿಯಿಂದ ಗಂಗಾವತಿ ಅಖಾಡ ಸಾಕಷ್ಟು ಕುತೂಹಲ ಮೂಡಿಸಿದೆ. ಒಂದ್ಕಡೆ ಹಾಲಿ ಬಿಜೆಪಿ ಶಾಸಕನಿಗೆ ನಡುಕ ಶುರುವಾಗಿದ್ರೆ. ಮತ್ತೊಂದೆಡೆ ಕಾಂಗ್ರೆಸ್​ ಪಾಳಯದಲ್ಲೂ ತಳಮಳ ಸೃಷ್ಟಿಸಿದೆ. ಈ ಬಗ್ಗೆ ಕೊಪ್ಪಳದಲ್ಲಿ ಮಾತನಾಡಿದ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ, ನಾನು ನಾಲ್ಕು ಬಾರಿ ಗಂಗಾವತಿ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದೇನೆ. ಎರಡು ಬಾರಿ ಗೆದ್ದಿದ್ದೇನೆ, ಎರಡು ಬಾರಿ ಸೋತಿದ್ದೇನೆ. ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ. ಈ ಕಾರಣಕ್ಕೆ ಕ್ಷೇತ್ರದ ಜನ ನನ್ನ ಪರ ಇದ್ದಾರೆ. ಕುಷ್ಟಗಿ ಕ್ಷೇತ್ರಕ್ಕೆ ಮುಸ್ಲಿಂ ವ್ಯಕ್ತಿಗೆ ಟಿಕೆಟ್ ನೀಡಬೇಕು ಎಂಬ ಎಚ್.ಆರ್.ಶ್ರೀನಾಥ್ ಹೇಳಿಕೆಗೆ ಪ್ರತಿಕ್ರಿಯಿಸಿರೋ ಅನ್ಸಾರಿ, ಇದು ಅವರು ರಕ್ತಗತವಾಗಿ ಮಾಡಿಕೊಂಡು ಬಂದ ರಾಜಕೀಯ. ಎಲ್ಲಿ ಮುಸ್ಲಿಮರು ಸೋಲುತ್ತಾರೋ ಅಲ್ಲಿ ಟಿಕೆಟ್ ಕೊಡು ಅಂತಾರೆ. ಸೋತ ನಂತರ ಮುಸ್ಲಿಮರು ಸೋಲುತ್ತಾರೆ ಅಂತಾರೆ. ನಾನು ಗಂಗಾವತಿಯಲ್ಲಿ ಎರಡು ಬಾರಿ ಗೆದ್ದಿದ್ದೇನೆ. ಆಗ ನಾನು ಶ್ರೀನಾಥ್ ಬೆಂಬಲದಿಂದ ಗೆದ್ದಿಲ್ಲ. ಅವರಿಂದ ನನಗೆ ಒಂದು ವೋಟ್ ಕೂಡ ಬಂದಿರಲಿಲ್ಲ. ಜನಾರ್ದನ ರೆಡ್ಡಿ ಗಂಗಾವತಿ ಕ್ಷೇತ್ರದಿಂದ ಸ್ಪರ್ಧೆ ‌ಮಾಡಿದ್ರೂ, ನಾನು ಗೆಲ್ಲುತ್ತೇನೆ ಎಂಬ ವಿಶ್ವಾಸ ಇದೆ ಎಂದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ನಾಲ್ವರು ಹಂತಕರು ಅಂದರ್​