Select Your Language

Notifications

webdunia
webdunia
webdunia
webdunia

ಜನಾರ್ದನ ರೆಡ್ಡಿ ರಾಜಕೀಯಕ್ಕೆ ಬರಬೇಕು - ಶ್ರೀರಾಮುಲು

Janardhana Reddy should enter politics
bangalore , ಮಂಗಳವಾರ, 1 ನವೆಂಬರ್ 2022 (17:32 IST)
ಮಾಜಿ ಸಚಿವ ಜನಾರ್ದನರೆಡ್ಡಿ BJP ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ವಿಚಾರವಾಗಿ ಸಚಿವ B. ಶ್ರೀರಾಮುಲು ಪ್ರತಿಕ್ರಿಯೆ ನೀಡಿದ್ದಾರೆ. ಅವರು ಯಾವ ಕಾರಣಕ್ಕೆ ಈ ಹೇಳಿಕೆ ನೀಡಿದ್ದಾರೆ ಎಂಬುದು ಗೊತ್ತಿಲ್ಲ, ಈ ಬಗ್ಗೆ ನಾನು ಜನಾರ್ದನರೆಡ್ಡಿಯವರ ಜೊತೆ ಹಾಗೂ ರೆಡ್ಡಿ ಪಕ್ಷದ ವರಿಷ್ಠರ ಜೊತೆ ಮಾತನಾಡುವೆ ಎಂದ್ರು.  ಬಳ್ಳಾರಿಯಲ್ಲಿ ಮಾತನಾಡಿದ ಶ್ರೀರಾಮುಲು ಜನಾರ್ದನರೆಡ್ಡಿ BJP ಪಕ್ಷವನ್ನು ಕಟ್ಟಿದವರು, ಮೊದಲಿನಿಂದಲೂ ಅವರು BJP ಪಕ್ಷದ ಜೊತೆಗೆ ಇದ್ದಾರೆ. ಜನಾರ್ಧನರೆಡ್ಡಿ ಅವರು ಸಕ್ರಿಯ ರಾಜಕೀಯಕ್ಕೆ ಬರಬೇಕು ಅನ್ನೋದು ಎಲ್ಲರ ಇಚ್ಛೆಯಾಗಿದ್ದು, ಅವರಿಗೆ ಮುಜುಗರ ತರುವ ಕೆಲ್ಸವನ್ನ ಯಾರೂ ಮಾಡುವುದಿಲ್ಲ ಎಂದು ಭರವಸೆ ನೀಡಿದ್ರು. ಮುಂದುವರಿದು ಮಾತನಾಡಿದ ಅವರು, ನವೆಂಬರ್ 20ರಂದು ಬಳ್ಳಾರಿಯಲ್ಲಿ ಬೃಹತ್ S.T ಸಮಾವೇಶ ನಡೆಸಲಾಗುತ್ತೆ. ಬಳ್ಳಾರಿ ಹೊರವಲಯದಲ್ಲಿ ನೂರು ಎಕರೆ ಜಮೀನಿನಲ್ಲಿ ಸಮಾವೇಶ ಆಯೋಜಿಸಲಾಗಿದೆ. ನಿರೀಕ್ಷೆಗೂ ಮೀರಿ ಜನರು ಸೇರುವ ನಿರೀಕ್ಷೆ ಇದೆ. S.T. ಸಮಾವೇಶಕ್ಕೆ ಕೇಂದ್ರ ನಾಯಕರನ್ನ ಕರೆಯಿಸುವ ಚಿಂತನೆ ಇದೆ. ಈ ಬಗ್ಗೆ ಸಿಎಂ ಬೊಮ್ಮಾಯಿ ಜೊತೆ ಚರ್ಚೆ ನಡೆಸಲಾಗಿದೆ ಎಂದು ಶ್ರೀ ರಾಮುಲು ಹೇಳಿದ್ರು

Share this Story:

Follow Webdunia kannada

ಮುಂದಿನ ಸುದ್ದಿ

ಪ್ರೀತಂ ಗೌಡ ವಿರುದ್ಧ ಭವಾನಿ ರೇವಣ್ಣ ವಾಗ್ದಾಳಿ