Select Your Language

Notifications

webdunia
webdunia
webdunia
webdunia

ಸಿದ್ದರಾಮಯ್ಯ ಮಹಾ ಸುಳ್ಳ ಎಂದ ಶ್ರೀರಾಮುಲು

ಸಿದ್ದರಾಮಯ್ಯ ಮಹಾ ಸುಳ್ಳ
ಸಿದ್ದರಾಮಯ್ಯ ಮಹಾ ಸುಳ್ಳ. ಸುಳ್ಳೇ ಅವರ ಮನೆ ದೇವರು ಎಂದು ಸಿದ್ದರಾಮಯ್ಯ ವಿರುದ್ಧ ಸಾರಿಗೆ ಸಚಿವ ಶ್ರೀರಾಮುಲು ವಾಗ್ದಾಳಿ ಮಾಡಿದರು. ರಾಯಚೂರಿನಲ್ಲಿ ಮಾತನಾಡಿದ ಅವರು,  ಸಿದ್ದರಾಮಯ್ಯ ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ. ರಾಜ್ಯದ ಹಿಂದುಳಿದ ಸಮುದಾಯದವರು ರೋಸಿ ಹೋಗಿದ್ದಾರೆ. SC, ST ಜನಾಂಗ ಸಿದ್ದರಾಮಯ್ಯರನ್ನ ನಂಬುವುದಿಲ್ಲ. ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯರನ್ನ ತಿರಸ್ಕರಿಸುತ್ತಾರೆ ಎಂದು ಹೇಳಿದರು. ಅಹಿಂದ, ಹಿಂದುಳಿದ ನಾಯಕ ಅನ್ನುವಂಥದ್ದು ಕೇವಲ ಚುನಾವಣೆ ಸಮಯದಲ್ಲಿ ಯಾಕೆ ನಿನಗೆ ಬರ್ತಾವೆ?. ಸಿದ್ದರಾಮಯ್ಯ ಮನಸ್ಸು ಮಾಡಿದರೆ ಆಯೋಗ ರಚನೆ ಮಾಡಬಹುದಿತ್ತು. ಆದರೆ ಮಾಡಲಿಲ್ಲ ಎಂದು ಕಿಡಿಕಾರಿದ್ರು. BJP ಮೀಸಲಾತಿ ಕೊಟ್ಟಂತ ಪಾರ್ಟಿ. ಸಿದ್ದರಾಮಯ್ಯಗೆ ವಿನಂತಿ ಮಾಡುತ್ತೇನೆ. ನೀವು ಅಹಿಂದ, ಹಿಂದುಳಿದ ನಾಯಕ ಅನ್ನೋದನ್ನ ವಿರೋಧಿಸುತ್ತೇನೆ. ರಾಹುಲ್ ಗಾಂಧಿ,D.K. ಶಿವಕುಮಾರ್​​​​​​, ಸಿದ್ಧರಾಮಯ್ಯರನ್ನ ಕೈ ಹಿಡಿದು ಓಡಿಸಿದ್ರು. ಡಿಕೆಶಿ, ಸಿದ್ದರಾಮಯ್ಯ ಇಬ್ಬರು ಗೊಲ್ಲ ಸಮುದಾಯದವರಿಗೆ ಅವಮಾನಿಸಿದ್ದಾರೆ ಎಂದು ಕಿಡಿಕಾರಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಸಚ್ಚಿದಾನಂದ ಮೂರ್ತಿಗೆ ಖಾಕಿ ನೋಟಿಸ್​