Select Your Language

Notifications

webdunia
webdunia
webdunia
webdunia

ಮೀಸಲಾತಿ ಹೆಚ್ಚಳ; ಶ್ರೀರಾಮುಲು ಧನ್ಯವಾದ

Increase in reservation; Thank you Sriramulu
bangalore , ಶನಿವಾರ, 8 ಅಕ್ಟೋಬರ್ 2022 (20:01 IST)
ವಾಲ್ಮೀಕಿ ಸಮುದಾಯ ಮತ್ತು ಪರಿಶಿಷ್ಟ ಜಾತಿ ಸಮುದಾಯದ 152 ಜಾತಿಗಳು ಇಂದು ಐತಿಹಾಸಿಕ ಕ್ಷಣದಲ್ಲಿವೆ. ನಮ್ಮ ಹಲವು ವರ್ಷಗಳ ಹೋರಾಟಕ್ಕೆ ಇಂದು ಫಲ‌ ಸಿಕ್ಕಿದೆ. ಸಿಎಂ ಬೊಮ್ಮಾಯಿ ತೆಗೆದುಕೊಂಡಿರುವ ನಿರ್ಧಾರಕ್ಕೆ ನಾನು ಅಭಿನಂದನೆಗಳನ್ನ ಸಲ್ಲಿಸುತ್ತೇನೆ ಎಂದು ಸಾರಿಗೆ ಸಚಿವ ಶ್ರೀರಾಮುಲು ತಿಳಿಸಿದ್ದಾರೆ. ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಕೊಡ್ತಿದ್ದಾರೆ. SC ಸಮುದಾಯಕ್ಕೆ 15ರಿಂದ 17, ST ಸಮುದಾಯಕ್ಕೆ 3-7 ರಷ್ಟು ಮೀಸಲಾತಿ ಏರಿಕೆ ಮಾಡಲು ನಿರ್ಧಾರ ಮಾಡಿದ್ದಾರೆ. ಹಲವು ವರ್ಷಗಳಿಂದ ಇದಕ್ಕಾಗಿ ಹೋರಾಟ ಮಾಡ್ತಿದ್ದಾರೆ. ನಾನು ಹಲವು ಬಾರಿ ಸಿಎಂ ಗೆ ಮನವಿ ಮಾಡಿದ್ದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ನನಗೆ ಸೋಷಿಯಲ್ ಮೀಡಿಯಾದಲ್ಲಿ ಬೈಸಿಕೊಂಡು ಸಾಕಾಗಿತ್ತು. ಆದರೂ ನಾನು ನನ್ನ ಮೀಸಲಾತಿ ಬೇಡಿಕೆಯನ್ನು ಕೈಬಿಟ್ಟಿರಲಿಲ್ಲ. ನನ್ನ ಬಂಧುಗಳು ಸಹ ನನಗೆ ಬೈದಿದ್ರು ಎಂದು ತಿಳಿಸಿದ್ರು. 

Share this Story:

Follow Webdunia kannada

ಮುಂದಿನ ಸುದ್ದಿ

ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರ ಹತ್ಯೆ