Publish Date: Sat, 08 Oct 2022 (19:46 IST)
Updated Date: Sat, 08 Oct 2022 (20:00 IST)
ತಲೆ ಮೇಲೆ ಕಲ್ಲು ಎತ್ತಿಹಾಕಿ ಯುವಕನ ಬರ್ಬರ ಹತ್ಯೆ ಮಾಡಿರುವ ಘಟನೆ ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಕೊಟ್ಗಾ ಗ್ರಾಮದಲ್ಲಿ ನಡೆದಿದೆ. ಚಂದನಕೇರಾ ಗ್ರಾಮದ 20 ವರ್ಷದ ಮೋಹನ್ ಎಂಬ ಯುವಕ ಕೊಲೆಯಾಗಿದ್ದು, ಕುಡಿದ ಮತ್ತಿನಲ್ಲಿ ಸ್ನೇಹಿತರೇ ಮೋಹನ್ನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಹಳೆ ವೈಷಮ್ಯದ ಹಿನ್ನಲೆಯಲ್ಲಿ ಆನಂದ ಮತ್ತು ಭೀಮಾ ಎಂಬ ಆರೋಪಿಗಳು ಮೋಹನ್ನನ್ನು ಕೊಲೆ ಮಾಡಿದ್ದಾರೆ. ರಟಕಲ್ ಠಾಣೆ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ. ಈ ಸಂಬಂಧ ರಟಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.