Select Your Language

Notifications

webdunia
webdunia
webdunia
webdunia

ನಶೆ ಬರುವ ಸಿರಪ್ ಮಾರಾಟ ಆರೋಪಿ ಬಂಧನ

Crime
ವಿಜಯನಗರದ ಮೆಡಿಕಲ್ ಶಾಪ್‌ ಒಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಆರೋಪಿ ಅಮಾನ್ ಉಲ್ಲಾ, ಇಮ್ರಾನ್ ಎಂಬಾತನಿಂದ ನಿಷೇಧಿತ ಎಸ್ಕೂಪ್ ಹೆಸರಿನ ಸಿರಪ್ ಖರೀದಿ ಮಾಡಿದ್ದ.
ಜೆ.ಪಿ. ನಗರ ಆಕ್ಸ್‌ಫರ್ಡ್ ಗ್ರೌಂಡ್ ಬಳಿ ಯುವಕರಿಗೆ ಮಾರಲು ಯತ್ನಿಸುತ್ತಿದ್ದ. ಈ ವೇಳೆ ಮಾಹಿತಿ ಪಡೆದು ಆರೋಪಿಯನ್ನ ಬಂಧಿಸಿ 356 ಬಾಟಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
 
ಎಸ್ಕೂಪ್ ಸಿರಪ್ ನಲ್ಲಿ ಕೊಡೈನ್ ಎಂಬ ಮಾದಕ ವಸ್ತುವಿನ ಅಂಶವಿದ್ದು, ಈ ಸಿರಪ್ ನೋವು ಮತ್ತು ಕೆಮ್ಮಿನ ಚಿಕಿತ್ಸೆಗೆ ಬಳಸಲಾಗುತ್ತದೆ. ಮಾದಕ‌ ಅಂಶ ಇರುವುದರಿಂದ ಈ ಸಿರಪ್ ಅನ್ನು ರಾಜ್ಯದಲ್ಲಿ ನಿಷೇಧಿಸಲಾಗಿದೆ. ಕಡಿಮೆ ಬೆಲೆಗೆ ಸಿಗುವ ಈ ಸಿರಪ್ ನ ಮಾದಕ ವ್ಯಸನಿಗಳು ನಶೆ ಏರಿಸಿಕೊಳ್ಳುತ್ತಾರೆ. ಸದ್ಯ ಆರೋಪಿಯನ್ನು ಬಂಧಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದೇಶದ ಐಕ್ಯತೆಗೆ ಧಕ್ಕೆಯಾಗುವ ಯಾವುದೇ ವಿಷಯಗಳನ್ನು ಪ್ರಸಾರ ಮಾಡಬಾರದು