Select Your Language

Notifications

webdunia
webdunia
webdunia
webdunia

ಮಕ್ಕಳ ಕಳ್ಳರು ಎಂಬ ವದಂತಿಗೆ ಬಲಿ

ಮಕ್ಕಳ ಕಳ್ಳರು ಎಂಬ ವದಂತಿಗೆ ಬಲಿ
ಬೆಂಗಳೂರು , ಶನಿವಾರ, 8 ಅಕ್ಟೋಬರ್ 2022 (15:50 IST)
ಮಕ್ಕಳ ಕಳ್ಳರಿದ್ದಾರೆ ಎಂಬ ವದಂತಿಗೆ ಒಬ್ಬನ ಪ್ರಾಣವೇ ಹಾರಿ ಹೋಗಿದೆ.‌ ಇನ್ನೊಂದು ಕಡೆ ಈ ಸಾವಿಗೆ ಲಾಕಪ್‌ಡೆತ್ ಕಾರಣ ಎಂಬ ಅನುಮಾನ ಕಾಡಿತ್ತು. ಸದ್ಯ ಸಿಸಿಟಿವಿ ದೃಶ್ಯ ಪ್ರಕರಣದ ಅಸಲಿ ಸತ್ಯವನ್ನ ಬಿಚ್ಚಿಟ್ಟಿದೆ. ರಾಮಮೂರ್ತಿ ನಗರದ ಜನ ಭಾಷೆ ಬಾರದಿದ್ದವನನ್ನು ಹಿಡಿದು ಮಕ್ಕಳ ಕಳ್ಳ ಎಂದು ಗುಂಪು ಕಟ್ಟಿ ಹೊಡೆದು ಪೊಲೀಸರಿಗೆ ಒಪ್ಪಿಸಿದ ಮೇಲೆ ಆತ ಕೆ ಆರ್ ಪುರಂ ಬಳಿ ಶವವಾಗಿ ಪತ್ತೆಯಾಗಿದ್ದ.
ರಾಮಮೂರ್ತಿ ನಗರ ಪೊಲೀಸರು ವಿಚಾರಣೆ ನಡೆಸಿದಾಗ ಆತ ಮೂಲತಃ ಜಾರ್ಖಂಡ್ ಮೂಲದವನಾಗಿದ್ದ. ಸಿಲಿಕಾನ್‌ ಸಿಟಿಯಲ್ಲಿ ಸೆಂಟ್ರಿಂಗ್ ಕೆಲಸ ಮಾಡಿಕೊಂಡಿದ್ದು, ರಾಮಮೂರ್ತಿ ನಗರದಲ್ಲೆ ವಾಸವಾಗಿದ್ದ ಎಂಬುದು ಗೊತ್ತಾಗಿತ್ತು, ಇನ್ನು ಠಾಣೆಯಲ್ಲಿ ಈ ಬಗ್ಗೆ ದೂರು ನೀಡುವಂತೆ ಪೊಲೀಸರು ಕೇಳಿದಾಗ ಸಂಜಯ್ ಬೇಡ ಎಂದಿದ್ದನಂತೆ. ಜೊತೆಗೆ ಠಾಣೆಯಿಂದ ನಡೆದುಕೊಂಡೆ ಹೋಗಿದ್ದಾನೆ. ಇದಕ್ಕೆ ಸಿಸಿಟಿವಿ ಕೂಡ ಸಾಕ್ಷಿಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ದಿವ್ಯ ಬಾಳಿನಲ್ಲಿ ಬಿರುಗಾಳಿ