Select Your Language

Notifications

webdunia
webdunia
webdunia
webdunia

ಪ್ರೀತಂ ಗೌಡ ವಿರುದ್ಧ ಭವಾನಿ ರೇವಣ್ಣ ವಾಗ್ದಾಳಿ

ಪ್ರೀತಂ ಗೌಡ ವಿರುದ್ಧ ಭವಾನಿ ರೇವಣ್ಣ ವಾಗ್ದಾಳಿ
ಹಾಸನ , ಮಂಗಳವಾರ, 1 ನವೆಂಬರ್ 2022 (17:27 IST)
ಶಾಸಕರೊಬ್ರು ಕೆಲವು ವಿಷಯಗಳಲ್ಲಿ ರೇವಣ್ಣ ಅವರನ್ನು ತಳ್ಳಿ ಹಾಕ್ತಾರೆ. ಎಲ್ಲವನ್ನೂ ನಾನೇ ಕಟ್ಟಿದೆ, ಎಲ್ಲವನ್ನೂ ನಾನೇ ಮಾಡ್ದೆ ಅಂತ ಕೊಚ್ಚಿಕೊಳ್ತಾರೆ. ಅವರು ವಿದ್ಯಾವಂತರೋ, ಅವಿದ್ಯಾವಂತರೋ ಗೊತ್ತಿಲ್ಲ ಎಂದು ಶಾಸಕ ಪ್ರೀತಂಗೌಡ ವಿರುದ್ಧ ಭವಾನಿ ರೇವಣ್ಣ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ರು. ಹಾಸನ ಜಿಲ್ಲೆ ಹೊಳೆನರಸೀಪುರದಲ್ಲಿ ನಡೆದ ಹಕ್ಕುಪತ್ರ ವಿತರಣೆ ಕಾರ್ಯಕ್ರಮದಲ್ಲಿ ಶಾಸಕ ಪ್ರೀತಂಗೌಡ ವಿರುದ್ಧ  ಭವಾನಿ ರೇವಣ್ಣ ಹರಿಹಾಯ್ದಿದ್ದಾರೆ. ರೋಡ್‌ನಲ್ಲಿ ಹೋಗುವ ಪ್ರತಿಯೊಬ್ಬರಿಗೂ ಗೊತ್ತು ಅಭಿವೃದ್ಧಿ ಕಾರ್ಯ ರೇವಣ್ಣರಿಂದ ಆಗಿದ್ದು ಅಂತ. ಆ ರೋಡ್‌ನಲ್ಲಿ ಓಡಾಡುವಂತಹ ಶಾಸಕರಿಗೆ ಈ ಬಿಲ್ಡಿಂಗ್ ಯಾರು ಕಟ್ಸಿದ್ದು ಅಂತ ಗೊತ್ತಾಗೊದಿಲ್ವಾ ಎಂದು ಕಿಡಿಕಾರಿದ್ರು. ರೇವಣ್ಣ ಅವರು 365 ದಿನಗಳಲ್ಲಿ 50 ದಿನ ಮೀಟಿಂಗ್‌ಗಾಗಿ ಬೆಂಗಳೂರಿನಲ್ಲಿ ಉಳಿತಾರೆ. ಉಳಿದ ದಿನಗಳಲ್ಲಿ ಸಮಯ ವ್ಯರ್ಥ ಮಾಡದೆ ಹಳ್ಳಿ ಹಳ್ಳಿಗೆ ಹೋಗಿ ಅಭಿವೃದ್ಧಿ ಕೆಲಸ ಮಾಡುತ್ತಾರೆ ಎಂದು ಪತಿ ರೇವಣ್ಣರನ್ನು ಹಾಡಿ ಹೊಗಳಿದ್ರು.
 

Share this Story:

Follow Webdunia kannada

ಮುಂದಿನ ಸುದ್ದಿ

ರಕ್ತದಾನದ ಮೂಲಕ ಕನ್ನಡ ರಾಜ್ಯೋತ್ಸವ